ಎಸ್.ಟಿ. ಮೀಸಲಾತಿಗೆ ಸೇರಿಸಲು ಒತ್ತಾಯಿಸಿ ಪ್ರತಿಭಟನೆ

ಗುಳೇದಗುಡ್ಡ, ಏ2: ಹಿಂದೂ ಸೂರ್ಯವಂಶ ಕ್ಷತ್ರಿಯ ಕಲಾಲ (ಖಾಟಿಕ) ಸಮಾಜವನ್ನು ಪರಿಶಿಷ್ಠ ಜಾತಿ ಮೀಸಲಾತಿಗೆ ಸೇರಿಸ ಬೇಕೆಂದು ಒತ್ತಾಯಿಸಿ ಗುಳೇದಗುಡ್ಡ ತಾಲ್ಲೂಕ ಸೂರ್ಯವಂಶ ಕ್ಷತ್ರಿಯ ಕಲಾಲ (ಖಾಟಿಕ) ಸಮಾಜ ಬಾಂಧವರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಪುರಸಭೆಯಿಂದ ಹೊರಟು ಸರಾಫ್ ಬಜಾರ, ಕಂಠಿಪೇಟೆ ಮಾರ್ಗದ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಉಪತಹಶೀಲ್ದಾರ್ ವೀರೇಶ ಬಡಿಗೇರ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಮಾಜದ ಮುಖಂಡರು, ರಾಜ್ಯದಲ್ಲಿ ಕ್ಷತ್ರಿಯ ಕಲಾಲ ಸಮಾಜದ ಕುಲ-ಕಸಬು ಕುರಿ ಹಾಗೂ ಮೇಕೆ ಮಾಂಶ ಮಾರಾಟ ಮಾಡುತ್ತಿದ್ದು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದ ಸಮಾಜವಾಗಿದೆ. ಕ್ಷತ್ರಿಯ ಕಲಾಲ ಸಮಾಜವನ್ನು ಉತ್ತರ ಭಾರತದ ಸುಮಾರು 11 ರಾಜ್ಯದ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಶಿಷ್ಠ ಜಾತಿ ಎಂದು ಘೋಷಿಸಲಾಗಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ನಮ್ಮ ಸಮಾಜದ ಜನಾಂಗವನ್ನು ಪರಿಶಿಷ್ಠ ಜಾತಿ ಮಿಸಲಾತಿಗೆ ಸೇರ್ಪಡೆ ಮಾಡಿದ್ದರಿಂದ ಸುಮಾರು 30 ವರ್ಷಗಳಿಂದ ಅಲ್ಲಿನ ಸರ್ಕಾರದ ಎಲ್ಲ ಸೌಲಭ್ಯ ಪಡೆಯು ತ್ತಿದ್ದಾರೆ ಎಂದರು.
ಸರ್ಕಾರದ ವತಿಯಿಂದ ಡಾ. ಅಂಬೇಡ್ಕರ್ ಸಂಶೋಧನಾ ಕೇಂದ್ರ ಹಾಗೂ ಪ್ರೊ. ಗುರುಲಿಂಗಯ್ಯಾ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ರಾಜ್ಯ ಸರ್ಕಾರ ವರದಿಯನ್ನು ಸಿಫಾರಸ್ಸ್ ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಕ್ಷತ್ರಿಯ ಸಮಾಜ ಕಲಾಲ, ಖಾಟಿಕ, ಕಸಾಬ, ಕಸಾಯಿ, ಕಟುಗ, ಕಟುಕ ಪದಗಳನ್ನು ಹೊಂದಿರುವ ಸಮಾಜವನ್ನು ಪರಿಶಿಷ್ಠ ಜಾತಿ ಮೀಸಲಾತಿಗೆ ಸೇರಿಸಬೇಕೆಂದು ಸಮಾಜದ ಮುಖಂಡ ರಾಮಣ್ಣ ಕಲಾಲ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಾಜದ ಅಧ್ಯಕ್ಷ ಬಾಬು ಆರ್. ಕಲಾಲ, ಉಪಾಧ್ಯಕ್ಷ ಅನೀಲ ಆರ್. ಕಲಾಲ, ಹನಮಂತ ಕಲಾಲ, ಯಲ್ಲಪ್ಪ ಶಿ. ಕಲಾಲ, ಮಲ್ಲೇಶ ಕಲಾಲ, ಅಶೋಕ ಆರ್. ಕಲಾಲ, ಮೇಲಗಿರಿ ಹ. ಕಲ್ಯಾಣಕರ, ಮೋತಿಲಾಲ ಬಿದರಿಕರ, ಸುನೀಲ ವಿಷ್ಣು ಕಲಾಲ, ಯಲ್ಲಪ್ಪ ಬಿದರಿಕರ, ಶೇಖರ ಹ. ಕಲಾಲ, ರತ್ನಾ ಕಲಾಲ, ಕಸ್ತೂರಿಬಾಯಿ, ನಂದಾ ಕಲಾಲ, ಪ್ರಜ್ವಲ ಕಲಾಲ, ಆನಂದ ಗೊವಿಂದಕರ, ರಾಘು, ಅನ್ನಪ್ಪ ಕಲಾಲ, ಹನಮಂತ ಕಲಾಲ ಇತರರು ಪಾಲ್ಗೊಂಡಿದ್ದರು.