ಎಸ್.ಟಿ. ಭರವಸೆ ಸಿಗುವವರೆಗೂ ಹೋರಾಟ –ವಿರುಪಾಕ್ಷಪ್ಪ

ಸಿರುಗುಪ್ಪ ಡಿ 27 : ನಗರದ ಎಸ್.ಎಲ್.ವಿ. ಹೋಟೆಲ್ ಸಭಾಂಗಣದಲ್ಲಿ ಕುರುಬರ ಎಸ್.ಟಿ.ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕೆ.ವಿರುಪಾಕ್ಷಪ್ಪ ಶನಿವಾರ ಸುದ್ದಿಗೋಷ್ಠಿ ನಡೆಸಿದ್ದರು.
ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯದ ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡ ಮೀಸಲಾತಿಗೆ ಸೇರಿಸುವಂತೆ ರಾಜ್ಯಾದಾದ್ಯಂತದ ಕುರುಬ ಸಮಾಜದಿಂದ ಹೋರಾಟದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿಯಲ್ಲಿಸಿ ಎಸ್.ಟಿ ಮೀಸಲಾತಿಗೆ ಸೇರಿಸಲು ಒತ್ತಾಯಿಸಲಾಗುವುದು.
ಕುರುಬರು ಈ ದೇಶದ ಮೂಲ ನಿವಾಸಿಗಳಾಗಿದ್ದು ದೇಶದಾದ್ಯಂತ ವಿಸ್ತಾರವಾಗಿ ಹರಡಿಕೊಂಡಿದ್ದು ನಮ್ಮ ಸಮಾಜ ಬುಡಕಟ್ಟು ಜನಾಂಗವÁಗಿರುತ್ತದÉ. ಎಸ್.ಟಿ. ಮೀಸಲಾತಿ ನಮ್ಮ ಹೋರಾಟವಲ್ಲ, ಇದು ನಮ್ಮ ಹಕ್ಕು. ಕರ್ನಾಟಕ ರಾಜ್ಯದಲ್ಲಿ ಜೇನು ಕುರಬ, ಕಾಡು ಕುರುಬ, ಗೊಂಡ, ರಾಜಗೊಂಡ ಕುರುಬ, ಕುರುಮನ್ಸ್, ಜಾತಿಗಳು ಪರಿಶಿಷ್ಠ ಪಟ್ಟಿಯಲ್ಲಿದ್ದು, ಕ್ರಮ ಸಂಖ್ಯೆ 28ರಲ್ಲಿ ಕುರುಬ ಜಾತಿಯು ಕೊಡುಗು ಜಿಲ್ಲೆಗೆ ಮಾತ್ರ ಸೀಮಿತಗೊಂಡಿದೆ. ಎಸ್.ಟಿ. ಮೀಸಲಾತಿ ಪ್ರಮಾಣ ಹೆಚ್ಚಿಸಿ ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಕುರುಬರಿಗೆ ಮೀಸಲಾತಿ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ.
ಆದರೆ ಸರ್ಕಾರಗಳು ನಿರ್ಲಕ್ಷ ತೋರುತ್ತಿರುವುದರಿಂದ ನಮ್ಮ ಹಕ್ಕುಗಳಿಗಾಗಿ ಕಾಗಿನೆಲೆ ಕನಕಗುರು ಪೀಠದ ಜಗದ್ಗುರುಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ನಡೆಸಿ ಫೆಬ್ರವರಿ 7ರಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ.
ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಮೂರು ಜಿಲ್ಲಗಳ ಎಸ್.ಟಿ.ಹೋರಾಟ ಸಮಿತಿ ಮತ್ತು ಎಲ್ಲ ಕುಲ ಗುರುಗಳು ಮತ್ತು ಕುರುಬ ಸಮಾಜದ ಎಲ್ಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜನವರಿ 4ರಂದು ಸಿಂಧನೂರಿನ ಶ್ರೀಕನಕದಾಸ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾವೇಶಕ್ಕೆ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರ್ಗಿ ಸೇರಿದಂತೆ ಎಲ್ಲ ಕುಲಬಾಂಧವರು ಆಗಮಿಸಲು ಕೋರಿದರು.
ದಮ್ಮೂರು ಸೋಮಪ್ಪ, ಕುರುಬರ ಎಸ್.ಟಿ ಮಿಸಲಾತಿ ಹೊರಾಟ ಸಮಿತಿಯ ತಾಲೂಕು ಅಧ್ಯಕ್ಷ ಉಲ್ತಿ ಭೀಮಣ್ಣ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಎರ್ರೆಗೌಡ, ಕುರುಬರ ಎಸ್.ಟಿ ಮಿಸಲಾತಿ ಹೊರಾಟ ಸಮಿತಿಯ ಜಿಲ್ಲಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಕುರುಬರ ಎಸ್.ಟಿ ಮಿಸಲಾತಿ ಹೊರಾಟ ಸಮಿತಿಯ ಜಿಲ್ಲಾ ಪ್ರದಾನ ಕಾರ್ಯದರ್ಶಿ ಕುರುಗೋಡು ಚನ್ನ ಬಸವರಾಜ, ಕುರುಬರ ಎಸ್.ಟಿ ಮಿಸಲಾತಿ ಹೊರಾಟ ಸಮಿತಿಯ ವಿಭಾಗಿ ಅಧ್ಯಕ್ಷ ಕುಡಿತಿನಿ ರಾಮಾಂಜಿನಿ, ಕುರುಬರ ಎಸ್.ಟಿ ಮಿಸಲಾತಿ ಹೊರಾಟ ಸಮಿತಿಯ ವಿಭಾಗಿ ಉಪಾಧ್ಯಕ್ಷ ಎನ್.ಕರಿಬಸಪ್ಪ, ಕುರುಬ ಸಮಾಜದ ಮುಖಂಡರಾದ ಬಿ.ಕೆ.ಗಾದಿಲಿಂಗ ಗೌಡ, ಕೊಳಗಲ್ ರಾಮಾಂಜಿನಿ, ಪೂಜಾರಿ ಪ್ಯಾಟೆಪ್ಪ, ಕಂಬಳಿ ಮಲ್ಲಿಕಾರ್ಜುನ, ಮಂಡಗಿರಿ ಕೃಷ್ಣ, ಆರ್.ಡಿ. ಉಮೇಶ್. ಮಾರೆಪ್ಪ, ರೇಣುಕಾರಾಜ್, ನಾಗೇಂದ್ರ, ಬಿ.ಚಂದ್ರಸೇರಿದಂತೆ ಅನೇಕರಿದ್ದರು.