ಎಸ್.ಟಿ ಪ್ರಮಾಣ ಪತ್ರ ಕುರಿತು ಬರುವ ಅಧಿವೇಶನದಲ್ಲಿ ಪ್ರಸ್ತಾವನೆಃ ಶಾಸಕ ಬಸನಗೌಡ ಪಾಟೀಲ್

ವಿಜಯಪುರ, ಡಿ.27-ಕೋಳಿ (ಗಂಗಾಮತ) ಸಮುದಾಯಕ್ಕೆ ಎಸ್.ಟಿ ಪ್ರಮಾಣ ಪತ್ರ ಕುರಿತು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಬರುವ ಅಧಿವೇಶನದಲ್ಲಿ ತಮ್ಮ ಸಮುದಾಯದ ಪರವಾಗಿ ದ್ವನಿ ಎತ್ತಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ್ (ಯತ್ನಾಳ) ಹೇಳಿದರು.
ನಗರದ ಚೌಧರಿ ಆಸ್ಪತ್ರೆ ಹತ್ತಿರದ ಶ್ರೀ ಅನಂತಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಡೆದ ಜ್ಞಾನಗಂಗಾ ವಿವಿದೋದ್ದೇಶ ಸಹಕಾರಿ ಸಂಘ ನಿಯಮಿತ ಹಾಗೂ ವಿವಿದ ಸಂಘ ಸಂಸ್ಥೆಗಳ ಸಹಯೋಗದಲ್ಲಿ 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ದ್ವೀತಿಯ ಪಿ.ಯು.ಸಿ ಪ್ರತಿಭಾವಂತ ವಿಧ್ಯರ್ಥಿಗಳಿಗೆ, ಸಮಾಜದ ಗಣ್ಯರಿಗೆ/ಹಿರಿಯ ಸಾಧಕರಿಗೆ ಸನ್ಮಾನಿಸಿ ಮಾತನಾಡಿ ಈ ಸಮುದಾಯವು ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕಾದರೆ ಮೊದಲು ಶಿಕ್ಷಣವಂತರಾಗಬೇಕು ಪ್ರತಿಭೆಗಳು, ಪುರಸ್ಕಾರಗಳು ಅಕಸ್ಮಾತಾಗಿ ಬರುತ್ತವೆ ನಾವು ನಿರೀಕ್ಷಿಸಲು ಸಾಧ್ಯವಾಗುವುದುದಿಲ್ಲ ಈ ಸಮುದಾಯದ ಒಬ್ಬ ವ್ಯಕ್ತಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯನಾಗಿರುವುದು ಒಂದು ಹೆಮ್ಮೆಯ ವಿಷಯ ಅವರು ಕಷ್ಟಪಟ್ಟು ಅಭ್ಯಸಿಸಿ ಈ ಹುದ್ದೆಗೆ ಬಂದಿದ್ದಾರೆ ಅವರ ಸೇವೆ ಈ ಸಮುದಾಕ್ಕೆ ಅತ್ಯವಶ್ಯಕ ಅವರ ಮಾರ್ಗದರ್ಶನದಂತೆ ತಾವುಗಳು ನಡೆಯಬೇಕು ಎಂದರು.
ಬಹಳ ಹಿಂದಿನಿಂದ ಎಸ್.ಟಿ ಕುರಿತು ಸಮುದಾಯದ ಬೇಡಿಕೆ ಇದೆ ಅದರ ಕುರಿತು ಬರುವ ಅಧಿವೇಶನದಲ್ಲಿ ತಮ್ಮ ಸಮುದಾಯಕ್ಕೆ ಎಸ್.ಟಿ ಪ್ರಮಾಣಪತ್ರ ಕುರಿತು ದ್ವನಿ ಎತ್ತುತ್ತೇನೆ ತಮ್ಮ ಸಮುದಾಯಕ್ಕೆ ಸಭೆ ನಡೆಸಲು ಕಚೇರಿ ಇಲ್ಲವೆ ಮಂಗಲ ಕಾರ್ಯಾಲಯ ನಿರ್ಮಾನಕ್ಕೆ ಸ್ಥಳ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಇದರೊಂದಿಗೆ ಸಮಾಜದ ಸಹಾಯ ಸಹಕಾರ ದಾನಿಗಳ ಮುಂದೆ ಬರಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಸಾಯಬಣ್ಣಾ ತಳವಾರ ಮಾತನಾಡಿ ಆತ್ಮ ವಿಶ್ವಾಸ, ಹೋರಾಟ, ಶ್ರಮ ಹಾಗೂ ಸಂಘಟನೆಗಳನ್ನು ಮೈಗೂಡಿಸಿಕೊಂಡಾಗ ಸಾಧನೆ ಮಾಡಲು ಸಾಧ್ಯ ಪ್ರತಿಭೆ,ಪುರಸ್ಕಾರಗಳನ್ನು ನಾವು ಹುಡಿಕೊಂಡು ಹೋಗಬಾರದು ಅವುಗಳು ತಾವಾಗಿಯೆ ಬರಬೇಕು ಇಂದು ನಮ್ಮ ಸಮಾಜ ವಿದ್ಯಾರ್ಥಿಗಳು ಕೂಡ ಹೆಚ್ಚು ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದಾರೆ ಇಂತಹ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವು ಸಂತೋಷದ ವಿಷಯವಾಗಿದೆ ಎಂದು ಹೇಳಿದರು. ನಮಗೆ ಅವಮಾನಗಳು ಪ್ರತಿ ಹೆಜ್ಜೆ ಹೆಜ್ಜೆಗೂ ಬರುತ್ತವೆ ಅವುಗಳನ್ನು ಮೀರಿ ನಾವು ಓದಬೇಕು ಅಂದಾಗ ನಾವು ಯಶಸ್ಸನ್ನು ಕಾಣಲು ಸಾಧ್ಯ ಸಮಾಜದಲ್ಲಿ ಹಲವಾರು ಸಂಘಟಣೆಗಳಿವೆ ನಮ್ಮನ್ನು ತಮಗೆ ಅನುಕೂಲ ಬಂದಂತೆ ಬಳಸಿಕೊಳ್ಳುತ್ತವೆ ಆದರೆ ನಮಗೆ ಉತ್ತಮವನ್ನು ಬಯಸುವುದಿಲ್ಲ ಸಮಾಜದಲ್ಲಿ ರೈತರು ಕೂಲಿಕಾರ್ಮಿಕರು ವಲಸೆ ಹೋಗುವವರು ಬಹಳ ಜನ ಇರುವುರು ಸಮಾಜ ಅವರ ಕುರಿತು ಚಿಂತಿಸಬೇಕು ಸುಮಾರು 1996 ರಿಂದಲೇ ಎಸ್.ಟಿ ಕುರಿತು ಹೋರಾಟಗಳು ನಡೆಯುತ್ತಲಿವೆ ಇಲ್ಲಿಯವರೆಗೂ ನಮಗೆ ನ್ಯಾಯ ದೊರಕಿಲ್ಲ ನಮ್ಮವರೆ ನಮ್ಮನ್ನು ಕತ್ತಲಲ್ಲಿಟ್ಟು ಪ್ರಚಾರ ಪಡೆದುಕೊಳ್ಳುವ ಸಂಘಟಣೆಗಳು ಇದರ ಹೊರತಾಗಿಲ್ಲ ಸಂಘಟಣೆಗಳು ಸಮಾಜದ ಮದ್ಯದಲ್ಲಿ ಹುಟ್ಟಬೇಕು ಸಮಾಜದ ಆಗು ಹೋಗುಗಳನ್ನು ಪರಾಮರ್ಶಿಸಬೇಕು ಒಗ್ಗಟ್ಟನ್ನು ಪ್ರದರ್ಶಿಸಬೇಕು ಅಂದಾಗ ಮಾತ್ರ ಸಮಾಜ ಉನ್ನತ ಮಟ್ಟಕ್ಕೇರಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅತಿಥಿಗಳಾಗಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಎಂ.ಬಿ ಹೆಗ್ಗಣ್ಣವರ ಮಾತನಾಡಿ ಸತತ ಪರಿಶ್ರಮ ಹೋರಾಟದಿಂದ ಸಾಧನೆ ಮಾಡಲು ಸಾಧ್ಯ ಆಶಾವಾದಿಗಳಾಗಿ ನಿರಾಶಾವಾದಿಗಳಾಗಬೇಡಿ ನಮಗೆ ಜನ್ಮ ನೀಡಿದ ತಂದೆ-ತಾಯಿ ಅಕ್ಷರ ಜ್ಞಾನ ನೀಡಿದ ಸಂಸ್ಥೆ, ಸಮಾಜ, ವಿದ್ಯಾರ್ಥಿಳಾಗಿ ಕಳೆದ ದಿನಗಳು ಎಂದಿಗೂ ಮರೆಯಬಾರದು ಎಲ್ಲ ಸಮುದಾಯಗಳಲ್ಲಿಯೂ ಇಂದಿನ ಶಿಕ್ಷಣ ವ್ಯವಸ್ಥೆಗಳಲ್ಲಿ ಹೆಚ್ಚು ಹೆಚ್ಚು ಅಂಗಳನ್ನು ಪಡೆತ್ತಿರುವುದು ಹೆಮ್ಮೆಯ ಸಂಗತಿ ನಮ್ಮ ಸಮುದಾಯದಲ್ಲಿಯೂ ಕೂಡ ಇಂತಹ ಪ್ರತಿಭೆಗಳು ಹೊರಹೊಮ್ಮುತ್ತಿವೆ ಬಹಳ ಸಂತೋಷದ ವಿಷಯ ಇಂತಹ ಪುರಸ್ಕಾರಗಳಿಂದ ಸಮಾಜದಲ್ಲಿರುವ ವಿದ್ಯಾರ್ಥಿಗಳಿಗೂ ಪ್ರೊತ್ಸಾಹಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಜ್ಞಾನಗಂಗಾ ವಿವಿದೋದ್ದೇಶ ಸಹಕಾರ ಸಂಘದ ಗೌರವ ಅಧ್ಯಕ್ಷರಾದ ಡಾ.ಅಶೋಕ ಸಾಸನೂರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಸ್ನೇಹ ಗಂಗಾವಾಹಿನಿ ಗೌರವಾಧ್ಯಕ್ಷರಾದ ಡಾ.ಬಿ.ಪಿ ಬುಳ್ಳಾ, ನ್ಯಾಯವಾದಿಗಳು ಹಾಗೂ ಸಾಹಿತಿಗಾಳಾದ ಶ್ರೀಮತಿ ವಿದ್ಯಾವತಿ ಅಂಕಲಗಿ ಮಾತನಾಡಿದರು. ವಿಶ್ರಾಂತ ಮುಖ್ಯಗರುರುಗಳಾದ ಸಿದ್ದಣ್ಣ ಓತಿಹಾಳ ಆಶಯ ನುಡಿ ನುಡಿದರು ಸಿಂದಗಿಯ ಶ್ರೀ ಶಾಂತಗಂಗಾಧರ ಮಹಾಸ್ವಾಮಿಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು.
ಎಸ್.ಎಸ್.ಎಲ್.ಸಿ 13 ಪಿ.ಯು.ಸಿ 3 ವಿದ್ಯಾರ್ಥಿ, ವಿದ್ಯಾಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮತಿ ಮಂಜುಳಾ ದೇವರಹಿಪ್ಪರಗಿ ಸ್ವಾಗತ ಗೀತೆ ಹಾಡಿದರು. ಸಂಶೋಧನೆ ಕ್ಷೇತ್ರದಲ್ಲಿ ಸಾಧನೆ ಗೈದ ಸಾದಕರಾದ ಡಾ.ಕಾಶಿಬಾಯಿ ರವಿ ಜಾಯವಾಡಗಿ, ಡಾ. ವೀಣಾ ಬಸವರಾಜ ಯರಗೋಳ, ಡಾ.ಬಸವರಾಜ ಸಾಲೊಟಗಿ,ಡಾ.ಶಿವಾನಂದ ಗುತ್ತರಗಿ, ಡಾ. ಹನಮಂತ ನಾಟೀಕಾರ, ಡಾ.ಶರಣು ತಳವಾರ, ಡಾ.ರಮೇಶ ಅಂಬಿಗೇರ, ಡಾ. ಅಂಬಣ್ಣ ಢವಳಾರ, ಡಾ.ರವಿ ಜಾಯವಾಡಗಿ, ಡಾ. ಬಸವರಾಜ ಜಮಾದಾರ, ಡಾ.ರೇವಣಸಿದ್ದ ದೇಗಿನಾಳ,ಡಾ.ಭವಾನಿ ಧೂಳಖೇಡ, ಡಾ.ನೀತು ಪ್ರಮೋದ ನಾಯಕೋಡಿ ಡಾ.ಜೋತಿ ಓತಿಹಾಳ, ಶ್ರೀಮತಿ ಪುಲಕೇಶಿ ಚೌಧರಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷರಾದ ಎಸ್.ಎಮ್ ಕಣಬೂರ, ಖ್ಯಾತ ಯೋಗ ಗುರು ಎಸ್.ಕೆ ಹೊಳೆಪ್ಪನವರ, ಸಮಾಜ ಮುಖಂಡರುಗಳಾದ ಪುಲಕೇಶಿ ಚೌಧರಿ, ಶಿವಾನಂದ ಅಂಬಿಗೇರ, ಡಾ. ರಾಮು ಯಲಕಗೋಡ, ಮಹಾದೇವಪ್ಪ ಸೊನ್ನ, ಲಕ್ಷ್ಮಣ ಜಾಯವಾಡಗಿ, ಎಸ್.ಎಮ್ ಗಾಣೂರ, ಜಗದೀಶ ಯಲಗೋಡ, ಬಿ.ಎಮ್ ನಾಯಕೋಡಿ, ಪಾಯಣ್ಣ ತಳವಾರ, ಧರ್ಮರಾಯ ವಾಲಿಕಾರ, ಐ.ಬಿ ಚೌಧರಿ, ಸುರೇಶ ಕನ್ನೂರ, ಆನಂದ ಆಲಗೂರ, ಸುಬಾಸ ನಂದಿಹಾಳ, ವಿಮಲಾಬಾಯಿ ವಾರನಕೋಡಿ, ಜೋತಿ ಚಂದ್ರಕಾಂತ ಕೋಳಿ, ಶಾಂತಾ ರಾಜೇಂದ್ರ ಕೊಂಡಗೂಳಿ, ಸವಿತಾ ಕಣಬೂರ, ಶ್ರೀಮತಿ ವಿಜಯಲಕ್ಷ್ಮೀ ಚೌಧರಿ, ಪ್ರಶಾಂತ ಚೌಧರಿ, ರಾಜಶೇಖರ ನರಗೋದಿ, ಶ್ರೀಮತಿ ಭಾಗ್ಯಶ್ರೀ ಪಂಡಿತ ಚಿಚಗಂಡಿ, ಡಾ.ಗೋಟ್ಯಾಳ, ಡಾ.ಶ್ರೀಶೈಲ ಕೋಳಿ, ಎಸ್.ಕೆ ಬಿದನೂರ, ಎಸ್.ಎ ದೇಗಿನಾಳ, ಎಸ್.ವಿ ನಾಯಕೋಡಿ, ಡಿ.ವಿ ಹಿರೊಳ್ಳಿ, ಕೆ.ಆರ್.ಬುಯ್ಯಾರ, ಎಸ್.ಯು ಬೂದಿಹಾಳ, ಶಿವಾನಂದ ಬಿದರಕೋಟಿ, ಹಾಗೂ ಇತರರು ಉಪಸ್ಥಿತರಿದ್ದರು.