
ರಾಯಚೂರು,೧೮ – ವಿಶ್ವಕರ್ಮ ಸಮಾಜವನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ,ಚಿನ್ನ ಬೆಳ್ಳಿ ಕೆಲಸಗಾರರ ಸಂಘ, ವಿಶ್ವಕರ್ಮ ಕಾರ್ಪೆಂಟರ್ ಸಂಘದಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಅರೆಬೆತ್ತಲೆ ಪ್ರತಿಭಟನೆಯನ್ನು ನಡೆಸಿದರು.
ವಿಶ್ವಕರ್ಮ ಸಮಾಜವನ್ನು ಎಸ್.ಟಿ ಮೀಸಲಾತಿಗೆ ಸೇರಿಸಿ ತ್ವರಿತಗತಿಯಲ್ಲಿ ಕೂಲಶಾಸ್ತ್ರ ಅಧ್ಯಯನ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ವಿಶ್ವಕರ್ಮ ಸಮಾಜವನ್ನು ಕಡೆಗಣಿಸುತ್ತಾ ಬಂದಿದೆ.ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರಿಲ್ಲ ೬ ತಿಂಗಳಾಯಿತು.ನಿಗಮಕ್ಕೆ ಅನುದಾನ ಕೊರತೆ.ಹಾಗೂ ವಿಶ್ವಕರ್ಮದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿರನ್ನು ಸಚಿವರನ್ನಾಗಿ ಮಾಡುವಲ್ಲಿ ಸರಕಾರ ವಿಫಲವಾಗಿದ್ದು,ಕೂಡಲೇ ಸರಕಾರ ವಿಶ್ವಕರ್ಮ ಸಮಾಜವನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಮಾರುತಿ ಬಡಿಗೇರ, ನಗರಾಧ್ಯಕ್ಷ ಶ್ರೀಕಾಂತ,ಜಿಲ್ಲಾ ಯುವ ಅಧ್ಯಕ್ಷ ಗುರು ಮಡ್ಡಿಪೇಟೆ, ಎಸ್.ರವೀಂದ್ರ, ಮಲ್ಲಿಕಾರ್ಜುನ, ಬ್ರಹ್ಮಯ್ಯ, ಮೌನೇಶ ಬಾಪೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.