ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ  ಪದವಿ ಪ್ರದಾನ ಸಮಾರಂಭ

ಚಿತ್ರದುರ್ಗ : ಜ.20 – ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ 32ನೇ ವರ್ಷದ ಪದವಿ ಪ್ರದಾನ ಸಮಾರಂಭ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ನಡೆಯಿತು. ಒಟ್ಟು 55 ಬಿ.ಡಿ.ಎಸ್. ಪದವೀಧರರು ಹಾಗೂ ದಂತಕುಳಿ ವಿಭಾಗದಿಂದ 2ಜನ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ಪಡೆದರು.ಮುಖ್ಯಅತಿಥಿಗಳಾಗಿ ಆಡಳಿತಾಧಿಕಾರಿ ಪಿ.ಎಸ್. ವಸ್ತ್ರದ್ ಕಾರ್ಯದರ್ಶಿ ಕೆ.ವಿ. ಪ್ರಭಾಕರ, ಬೆಂಗಳೂರು ಸರ್ಕಾರಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗೀರಡ್ಡಿ, ಪ್ರಾಂಶುಪಾಲರಾದ ಡಾ.ಆರ್. ಗೌರಮ್ಮ, ಡಾ.ರಘುನಾಥರೆಡ್ಡಿ, ಡಾ. ನಾಗರಾಜಪ್ಪ, ಧರಂ ಹಿಂದೂಜ, ಡಾ. ಹರೀಶ್, ಡಾ.ಕೇಶವರೆಡ್ಡಿ, ಡಾ.ಹರಿಣಿ, ಡಾ. ಜಯಚಂದ್ರ ಭಾಗವಹಿಸಿದ್ದರು.