ಎಸ್.ಜೆ.ಎಂ. ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಚಿತ್ರದುರ್ಗ.ಅ.೨೧; ಚಂದ್ರವಳ್ಳಿ ಎಸ್.ಜೆ.ಎಂ. ಕಾಲೇಜಿನಲ್ಲಿ ಎನ್.ಎಸ್.ಎಸ್. ಘಟಕದ ವತಿಯಂದ ಕಾಲೇಜಿನ ಆವರಣದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.ಸಮಾರಂಭದಲ್ಲಿ ಎಸ್.ಜೆ.ಎಂ. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಕೆ.ಸಿ.ರಮೇಶ್ ಮಾತನಾಡಿ, ಬಸವಣ್ಣನವರ ತತ್ವಗಳನ್ನು ಎಲ್ಲರೂ ಪಾಲಿಸಿದರೆ ಸಮಾಜದಲ್ಲಿ ಸಮಸ್ಯೆಗಳೇ ಇರುವುದಿಲ್ಲ. ಬಸವಣ್ಣನವರ ಅನುಭವ ಮಂಟಪ ವಾಲ್ಮೀಕಿಯವರ ಕಲ್ಪನೆಯಾಗಿತ್ತು. ಭಾರತದ ಸಂಸ್ಕೃತಿ ಅತ್ಯಂತ ಶ್ರೀಮಂತವಾದದ್ದು ಆದಿಕವಿ ವಾಲ್ಮೀಕಿ ಮಹರ್ಷಿರವರ ವಿಚಾರ, ತತ್ವಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕಿದೆ ಎಂದು ತಿಳಿಸಿದರು. ಕಾಲೇಜಿನ ಅಧೀಕ್ಷಕರಾದ ಕೆ.ಟಿ.ಕೇಶವಮೂರ್ತಿ ಹಾಗೂ ಪ್ರಾದ್ಯಾಪಕರಾದ ಮಂಜುನಾಥಸ್ವಾಮಿ ಮಾತನಾಡಿ ವಾಲ್ಮೀಕಿ ಜೀವನ ಹಾಗೂ ಸಾಧನೆ ಬಗ್ಗೆ ತಿಳಿಸಿದರು.
ಎನ್.ಎಸ್.ಎಸ್. ಅಧಿಕಾರಿ ಡಾ.ರೇವಣ್ಣ ಸ್ವಾಗತಿಸಿ ವಂದಿಸಿದರು.