ಎಸ್ ಜೆಎಂ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಅಂಗವಾಗಿ ಜ್ಞಾನ ಕಾರಂಜಿ ಕಾರ್ಯಕ್ರಮ

ದಾವಣಗೆರೆ.ಫೆ.22: ನಿಟುವಳ್ಳಿಯ ಎಸ್ ಜೆಎಂ ಪಬ್ಲಿಕ್ ಶಾಲೆಯ 19 ನೇ ವಾರ್ಷಿಕೋತ್ಸವ ಅಂಗವಾಗಿ ಜ್ಞಾನ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ವಿರಕ್ತಮಠದ ಬಸವಪ್ರಭುಶ್ರೀಗಳ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಿ. ಮಹೇಶ್ವರಪ್ಪ ವಹಿಸಿದ್ದರು. ಕಾರ್ಯಮವನ್ನು ಸಂಸ್ಥೆಯ ಅಧ್ಯಕ್ಷೆ ಪುಷ್ಪ ಮಹೇಶ್ಚರಪ್ಪ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾಂತೇಶ್ ವಿ. ಒಣರೊಟ್ಟಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು, ಸಿಆರ್ ಪಿ ಭರತ್, ಇ.ಎಂ. ಮಂಜುನಾಥ, ರಾಘು ದೊಡ್ಡಮನಿ ಉಪಸ್ಥಿತರಿದ್ದರು.