
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.22: ನಗರದ ಶ್ರೀ ಗುರು ತಿಪ್ಪೇರುದ್ರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳು ಪಿ.ಯು. ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿರುತ್ತಾರೆ. ವಿಜ್ಞಾನದಲ್ಲಿ ಶೇಕಡ 72 ಮತ್ತು ವಾಣಿಜ್ಯದಲ್ಲಿ ಶೇಕಡ 67 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಒಟ್ಟು 27 ವಿದ್ಯಾರ್ಥಿಗಳು ಡಿಸ್ಟಿಂಕ್ಷಷನ್ ವಿದ್ಯಾರ್ಥಿಗಳು ಮತ್ತು 95 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ವೈ. ಮಣಿಕಂಠ 573, ಮಹಿಪಾಲ್ ರೆಡ್ಡಿ, 565,ಜುಬೇದ ಬೇಗಂ563, ಕೆ.ಎಂ. ಪವನ್ 557. ವಿಜ್ಞಾನ ವಿಭಾಗದಲ್ಲಿ ನಯನ ಶೀಲ 547, ಮಹಮ್ಮದ್ ಸಹೇಲ್ 539, ಜಿ. ಚಂದನ 515, ಕಾರ್ತಿಕ್ ಐ.ಕೆ 513, ಅಂಕಗಳನ್ನು ಪಡೆದಿದ್ದಾರೆ ಎಂದು ಕಾಲೇಜ್ ನ ಪ್ರಾಚಾರ್ಯರು ತಿಳಿಸಿದ್ದಾರೆ.