ಎಸ್ ಜಿ ಟಿ ಕಾಲೇಜಿನಲ್ಲಿ ಮೋದಿ ಜೀವನ ಸಾಧನೆ ಪ್ರದರ್ಶನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.22:  ನಗರದ ಎಸ್.ಜಿ.ಟಿ ಕಾಲೇಜ್ ನಲ್ಲಿ ನಿನ್ನೆ   ನರೇಂದ್ರ ಮೋದಿ ಅವರ  ಜನ್ಮದಿನದ ಪ್ರಯುಕ್ತ ಸೇವ ಪಾಕ್ಷಿಕಾ ಕಾರ್ಯಕ್ರಮದ ಅಂಗವಾಗಿ  ಮೋದಿ ಅವರ ಜೀವನ ಚರಿತ್ರೆಯ  ಪೋಟೋ ಪ್ರದರ್ಶನ ಏರ್ಪಡಿಸಲಾಗಿತ್ತು.‌
ಕಾಲೇಜಿನ ವಿದ್ಯಾರ್ಥಿ ಸಮೂಹ ಇದನ್ನು ವೀಕ್ಷಿಸಿ ಮೋದಿ ಅವರ ಜೀವನ, ಸಾಧನೆ ಅರಿತುಕೊಂಡರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀರಶೇಖರ ರೆಡ್ಡಿ , ಗಾಳಿ ಶಂಕ್ರಪ್ಪ, ಬ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಸ್. ಅಶೋಕ್ ಕುಮಾರ್,ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಗುರುಲಿಂಗನಗೌಡ, ನಗರ ಅಧ್ಯಕ್ಷ ಕೆ.ಬಿ. ವೆಂಕಟೇಶ್ವರ, ಪ್ರದಾನ ಕಾರ್ಯದರ್ಶಿ ರಾಮಂಜಿನಿ, ಸುನಿಲ್ ರೆಡ್ಡಿ, ಕಾರ್ಯಕ್ರಮದ ಸಂಚಾಲಕ ಓಂ ಪ್ರಕಾಶ್, ಯುವ ಮೋರ್ಚಾದ ನಗರ ಅಧ್ಯಕ್ಷ  ಬಾಲುಚಂದ್ರ, ರಾಮ್ ಪ್ರಸಾದ್, ಅಮಾರ್ ನಾಥ್,
ಕಾಲೇಜಿನ ಪ್ರಾಂಶುಪಾಲ ರುದ್ರಪ್ಪ,  ಮಹಾನಗರ ಪಾಲಿಕೆಯ ಸದಸ್ಯರಾದ ಹನುಮಂತಪ್ಪ ಕೆ, ಇಬ್ರಾಹಿಂ ಬಾಬು, ನಗರದ ಮಹಿಳಾ ಮೋರ್ಚಾ ಅಧ್ಯಕ್ಷೆ  ಜ್ಯೋತಿ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.