ಎಸ್ ಕೋಡಿ ಸಮುದಾಯ ಭವನದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ

ಮಂಗಳೂರು, ನ.೧೦- ದಿನಾಂಕ ೦೭.೧೧.೨೦೨೦ ರಂದು ಸಿಒಡಿಪಿ (ರಿ) ಮಂಗಳೂರು, ಕಾರಿತಾಸ್ ಇಂಡಿಯಾ ಮತ್ತು ಸ್ನೇಹ ಒಕ್ಕೂಟ ಕಿನ್ನಿಗೋಳಿ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಎಸ್ ಕೋಡಿಯ ಸಮುದಾಯ ಭವನ ಕಿನ್ನಿಗೋಳಿ ಇಲ್ಲಿ ಆಯೋಜಿಸಲಾಯಿತು.
ಸಿಒಡಿಪಿ ಸಂಸ್ಥೆಯ ಸ್ಪರ್ಶ ಯೋಜನೆಯ ಸಂಯೋಜಕಿಯಾದ ಶ್ರೀಮತಿ ಶಿಲ್ಪ ರೈನಾ ಡಿ ಸೋಜರವರು ನೆರದ ಎಲ್ಲಾ ಗಣ್ಯರನ್ನು ಹಾಗೂ ಸ್ವ ಸಹಾಯ ಸಂಘದ ಸದಸ್ಯರನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷರಾದ ಸಿಒಡಿಪಿ ಸಂಸ್ಥೆಯ ನಿರ್ದೇಶಕರು ವಂ. ಸ್ವಾಮಿ ಓಸ್ವಲ್ಡ್ ಮೊಂತೇರೊ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪೀಡಿತರ ಸಂಖ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿ ಈ ಸ್ಪರ್ಶ ಯೋಜನೆಯು ಸಮಾಜದಲ್ಲಿ ಸಾಕಷ್ಟು ಜಾಗೃತಿ ತರಲಿ ಮತ್ತು ಪೀಡಿತರಿಗೆ ಸಾಂತ್ವನ ನೀಡಲಿ ಎಂದು ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾದ ಶ್ರೀಮಾನ್ ವಿಜಯ್ ಕುಮಾರ್, ಮುಖ್ಯಸ್ಥರು ಎನ್.ಟಿ.ಸಿ.ಪಿ ವಿಭಾಗ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರು ಕ್ಯಾನ್ಸರ್ ಕಾಯಿಲೆ ಹಾಗೂ ಇದಕ್ಕೆ ಪ್ರಮುಖ ಕಾರಣವಾದ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಸವಿಸ್ತರವಾಗಿ ಮಾಹಿತಿಯನ್ನು ನೀಡಿದರು.
ಕ್ಯಾನ್ಸರ್ ರೋಗವನ್ನು ಎದುರಿಸಿ ಗುಣಮುಖರಾದ ಶ್ರೀಮತಿ ಹರಿನ ಜೆ ರಾವ್ ಕ್ಯಾನ್ಸರ್ ರೋಗದ ಬಗ್ಗೆ ತಮ್ಮ ಸ್ವಂತ ಅನುಭವವನ್ನು ಹಂಚುವ ಮೂಲಕ ಆತ್ಮ ವಿಶ್ವಾಸವೇ ನಮಗೆ ಬಲ ಎಂದು ಹೇಳಿದರು.
ಸಿ.ಒ.ಡಿ.ಪಿ ಸಂಸ್ಥೆಯ ಸಹ ನಿರ್ದೇಶಕರಾದ ವಂ. ಸ್ವಾಮಿ ವಿನ್ಸೆಂಟ್ ಡಿ ಸೋಜರವರು ಮನೆಯಲ್ಲಿ ಸಾವಯವ ಕೈತೋಟ ಮಾಡಿ, ಸಾವಯವ ತರಕಾರಿ ಸೇವಿಸಿ ಆರೋಗ್ಯಕರ ಜೀವನ ನಡೆಸಲು ಕರೆ ನೀಡಿದರು. ಈ ಸಂದರ್ಭದಲ್ಲಿ ಸಿ.ಒ.ಡಿ.ಪಿ ಸಂಸ್ಥೆಯ ಪರವಾಗಿ ತರಕಾರಿ ಬೀಜವನ್ನು ನೆರೆದಂತಹ ಎಲ್ಲರಿಗೂ ವಿತರಿಸಿದರು.
ಬಳಿಕ ?ಸ್ಪರ್ಶ ಕ್ಯಾನ್ಸರ್ ವಿರುದ್ಧ ಆಂದೋಲನ? ಇದರ ಬಗ್ಗೆ ತಯಾರಿಸಿದ ಕಿರು ವೀಡಿಯೊವನ್ನು ಉದ್ಗಾಟಿಸಿ ಪ್ರದರ್ಶಿಸಲಾಯಿತು. ಇದನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸಲಾಗುವುದು.
ಸಿ.ಒ.ಡಿ.ಪಿ ಸಂಸ್ಥೆಯ ಸ್ಪರ್ಶ ಯೋಜನೆಯ ಕಾರ್ಯಕರ್ತೆಯಾದ ಶ್ರೀಮತಿ ಪುಷ್ಪವೇಣಿಯವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಸಿಒಡಿಪಿ ಸಂಸ್ಥೆಯ ಸ್ವ ಸಹಾಯ ಸಂಘದ ಸದಸ್ಯೆಯಾದ ಶ್ರೀಮತಿ ಮೀನಾಕ್ಷಿರವರು ವಂದಿಸಿದರು.