
ರಾಯಚೂರು.ಮಾ.೦೮- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರಲ್ಲಿ ಮತದಾನದ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ತೆಲುಗು ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರನ್ನು ರಾಜ್ಯ ಚುನಾವಣಾ ಆಯೋಗ ರಾಯಚೂರು ಜಿಲ್ಲಾ ಐಕಾನ್ ಎಂದು ನೇಮಕ ಮಾಡಿ ಅದೇಶಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗ ಚುನಾವಣಾ ಐಕಾನ್ ಗಳನ್ನು ನಿಯುಕ್ತಿಗೊಳಿಸಿ ಆದೇಶಿಸಿದೆ.
ವಿವಿಧ ಜಿಲ್ಲೆಗಳಿಗೆ ಚಲನಚಿತ್ರ ನಟರು, ನಿರ್ದೇಶಕರು, ಕ್ರೀಡಾಪಟುಗಳು ಕಲಾವಿದರು ಸೇರಿದಂತೆ ಇತರೇ ಕ್ಷೇತ್ರದಲ್ಲಿ ತಮ್ಮದೇಯಾದ ಖ್ಯಾತಿ ಹೊಂದಿದ ಪ್ರತಿಷ್ಠಿತರನ್ನು ಜಿಲ್ಲೆಗಳ ಐಕಾನ್ ಎಂದು ನಿಯುಕ್ತಿಗೊಳಿಸಿದೆ. ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ಶಿಫಾರಸ್ಸು ಮಾಡಿದಂತಹ ಹೆಸರುಗಳನ್ನು ಚುನಾವಣಾ ಆಯೋಗ ಅಂಗೀಕರಿಸಿದೆ. ಜಿಲ್ಲೆಯವರೇ ಆದ ಬಾಹುಬಲಿ ಮತ್ತು ಆರ್‌ಆರ್ ಆರ್ ಚಿತ್ರಗಳ ಖ್ಯಾತ ನಿರ್ದೇಶಕರಾದ ಎಸ್.ಎಸ್.ರಾಜಮೌಳಿ ಅವರನ್ನು
ರಾಯಚೂರು ಐಕಾನ್ ಎಂದು ಜಿಲ್ಲಾ ಜಿಲ್ಲಾಡಳಿತದಿಂದ ಶಿಪ್ಪಾರಸ್ಸು ಮಾಡಲಾಗಿತ್ತು.
ಫೆಬ್ರವರಿ ೨೭ ರಂದು ಈ ಬಗ್ಗೆ ಶಿಫಾರಸ್ಸು ಮಾಡಲಾಗಿತ್ತು. ಚುನಾವಣಾ ಆಯೋಗದ ರಾಜ್ಯ ಮುಖ್ಯಾಧಿಕಾರಿಗಳು ಜಿಲ್ಲೆಯಿಂದ ಶಿಫಾರಸ್ಸು ಮಾಡಲಾಗಿದ್ದ ಎಸ್.ಎಸ್.ರಾಜಮೌಳಿ ಅವರ ಹೆಸರನ್ನು ಜಿಲ್ಲೆಯ ಐಕಾನ್ ಎಂದು ಅಂಗೀಕರಿಸಿದೆ. ಚುನಾವಣೆಯಲ್ಲಿ ಜನಜಾಗೃತಿ ಮತ್ತು ಹೆಚ್ಚಿನ ರೀತಿಯಲ್ಲಿ ಮತದಾನ ನಿರ್ವಹಿಸಲು ಈ ನಿಯುಕ್ತಿಗೊಳಿಸಲಾಗಿದೆ.