ಎಸ್ ಎಸ್ ಮಲ್ಲಿಕಾರ್ಜುನ್ ಗೆ ಅಭಿಮಾನಿಗಳಿಂದ ಅಭಿಮಾನದ ಶುಭಹಾರೈಕೆದಾವಣಗೆರೆ. ಸೆ.22;  ಮಾಜಿ ಸಚಿವ  ಎಸ್ ಎಸ್ ಮಲ್ಲಿಕಾರ್ಜುನ ಜನ್ಮದಿನದ ಪ್ರಯುಕ್ತ  ದಾವಣಗೆರೆಯಲ್ಲಿ ಅಭಿಮಾನಿಗಳ ಬಳಗ ಮಧ್ಯರಾತ್ರಿಯಿಂದಲೇ ಶುಭಕೋರುವ ಆಚರಣೆಯಲ್ಲಿ ತೊಡಗಿದ್ದರು.ನಗರದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಮಧ್ಯರಾತ್ರಿ ೧೨ ಕ್ಕೆ ಎಸ್ ಎಸ್ ಎಂ ಅಭಿಮಾನಿಗಳು ಕೇಕ್ ಕತ್ತರಿಸಿ ಜನ್ಮದಿನ ಆಚರಣೆ ಮಾಡಿದರು.ಅಭಿಮಾನಿ ಬಳಗದ ಶಾಮನೂರು ಅರುಣ್ ಕುಮಾರ್ ಕ್ರೇನ್ ಮೂಲಕ ಸುಮಾರು 400 ಕೆಜಿ ಸೇಬಿನಹಾರ ಹಾಕುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ. ಸುಮಾರು ಐದು‌ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಎಸ್ ಎಸ್ ಎಂ ಗೆ ಶುಭಕೋರಿದರು.ನಂತರ ಎಸ್ ಎಸ್  ಮಲ್ಲಿಕಾರ್ಜುನ್ ಅವರು ತಮ್ಮ ತಂದೆ ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಕೇಕ್ ಕತ್ತರಿಸಿ ಕುಟುಂಬದ ಸದಸ್ಯರೊಂದಿಗೆ ಸಂಭ್ರಮ ಆಚರಣೆ ಮಾಡಿದರು.ನಗರದೆಲ್ಲೆಡೆ ಎಸ್ ಎಸ್ ಎಂಗೆ ಶುಭಕೋರುವ ಫ್ಲೆಕ್ಸ್ ಗಳು ಬ್ಯಾನರ್ ಗಳು ರಾರಾಜಿಸುತ್ತಿವೆ.ನಗರದ ಪ್ರಮುಖ ವೃತ್ತದಲ್ಲಿ ಅಭಿಮಾನಿಗಳ ಬಳಗದಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನಗರದ ೧೯ ನೇ ವಾರ್ಡ್ ನಲ್ಲಿ‌ ಇಂದು ಬೆಳಗ್ಗೆ ೬ ಗಂಟೆಯಿಂದ ಮನೆಗಳಿಗೆ ಹಾಲು,ಹಣ್ಣು ಮತ್ತು‌ ಸಿಹಿ ವಿತರಣೆ ಮಾಡಲಾಯಿತು.ಅಭಿಮಾನಿ ಬಳಗದವರು ಈಗಾಗಲೇ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರ ಆಯೋಜಿಸಿ ೫೫೫೫ ರಕ್ತ ಸಂಗ್ರಹ ಅಭಿಯಾನ ನಡೆಸಿದ್ದರು ಇಂದೂ ಸಹ ಎಸ್ ಎಸ್ ಎಂ ಯುವಶಕ್ತಿ ಬಳಗದವರು ಶಾಮನೂರಿನ ಸರ್ಕಾರಿ‌ ಶಾಲೆಯಲ್ಲಿ ರಕ್ತದಾನ‌ಶಿಬಿರ ನಡೆಸಿ ನಂತರ ಶಾಲಾ ಮಕ್ಕಳಿಗೆ ಬಟ್ಟೆ ಹಾಗೂ ಪುಸ್ತಕಗಳನ್ನು ವಿತರಣೆ ಮಾಡಿದರು.ಸುಮಾರು‌೫೫ ಆಟೋಗಳಲ್ಲಿ ಎಸ್ ಎಸ್ ಎಂ ಭಾವಚಿತ್ರದ ಮೆರವಣಿಗೆ ನಡೆಸಿದರು.