ಎಸ್.ಎಸ್.ಕೆ ಬ್ಯಾಂಕ್ ಸಂಸ್ಥಾಪಕ ದಿನಾಚರಣೆ

ಹುಬ್ಬಳ್ಳಿ ಮೇ 31 : ನಗರದ ದಾಜೀಬಾನ್ ಪೇಟೆಯಲ್ಲಿರುವ ದಿ. ಎಸ್.ಎಸ್.ಕೆ ಕೋ-ಆಪ್ ಬ್ಯಾಂಕ್ ನಿಯಮಿತದ 100 ನೇ ವರ್ಷದ ಸಂಸ್ಥಾಪಕ ದಿನಾಚರಣೆಯನ್ನು ಸಭಾ ಭವನದಲ್ಲಿ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಚೇರ್ಮನ್ ರಾದ ವಿಠ್ಠಲ ಲದ್ವಾ, ಭಾರತ ದೇಶದಲ್ಲಿ ಕೆಲವೇ ಕೆಲವು ಸಹಕಾರಿ ಬ್ಯಾಂಕುಗಳು 100 ವರ್ಷ ಪೂರೈಸಿದ್ದು, ಅವುಗಳಲ್ಲಿ ನಮ್ಮ ಬ್ಯಾಂಕು ಸಹ ಒಂದು ಎಂದು ತಿಳಿಸಲು ನಮಗೆ ಹೆಮ್ಮೆ ಅನಿಸುತ್ತದೆ ಎಂದರು.
ಬ್ಯಾಂಕಿನ ಸಂಸ್ಥಾಪಕರಾದ ದಿ. ಜನಾರ್ಧನಸಾ ಪವಾರ್, ದಿ. ರಾಮಚಂದ್ರಸಾ ಪೂಜಾರಿ ಹಾಗೂ ಬ್ಯಾಂಕಿನ ಶ್ರೇಯಾಭಿವೃದ್ಧಿಗಾಗಿ ಸೇವೆಯನ್ನು ಸಲ್ಲಿಸಿದ ಹರಿಸಾ ಎಲ್. ಖೋಡೆಯವರನ್ನು ಬ್ಯಾಂಕಿನ ಪುನಶ್ಚೇತನ ಮಂಡಳಿ ಸದಸ್ಯರನ್ನು ಎಂದು ಮರೆಯಲು ಸಾಧ್ಯವಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಣ ಬಂದ ನಂತರ ಬ್ಯಾಂಕಿನ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ಮಂಡಳಿ ಸದಸ್ಯ ನಾರಾಯಣ ಜರತಾರಘರ, ನಾರಾಯಣ ಬದ್ದಿ, ಅರ್ಜುನ ಅಥಣಿ, ದೀಪಕ್ ಮಗಜಿಕೊಂಡಿ, ಕೃಷ್ಣಸಾ ಕಾಟಿಗರ್, ಪ್ರಕಾಶ ಬುರಬುರೆ, ನಾರಾಯಣ ಖೋಡೆ, ವಸಂತ ಲದ್ವಾ, ಸರಳಾ ಭಾಂಡಗೆ, ರತ್ನಮಾಲಾ ಬದ್ದಿ, ಸುರೇಶ ಭಾಂಡಗೆ, ಅಂಬಾಸಾ ಪೂಜಾರಿ ಮತ್ತು ಅನಂತ ಬದ್ದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.