ಎಸ್.ಎಸ್.ಕೆ. ಕೋ-ಆಪ್ ಬ್ಯಾಂಕ್ ಆಡಳಿತ ಮಂಡಳಿಗೆ ಆಯ್ಕೆ


ಹುಬ್ಬಳ್ಳಿ,ಜು.16: ನಗರದ ದಿ. ಎಸ್.ಎಸ್.ಕೆ. ಕೋ- ಆಪರೇಟಿವ್ ಬ್ಯಾಂಕ್ ಹುಬ್ಬಳ್ಳಿ ಇದರ ಆಡಳಿತ ಮಂಡಳಿಯ ಚುನಾವಣೆ ಜರುಗಿದ್ದು ಎಸ್.ಎಸ್.ಕೆ. ಸಮಾಜದ ಪುನಶ್ಚೇತನ ಮಂಡಳಿಯ ಬೆಂಬಲಿತ ವಿಠ್ಠಲ ಪಿ. ಲದವಾ ನೇತೃತ್ವದ ತಂಡವು ಭರ್ಜರಿ ಜಯ ಸಾಧಿಸಿದೆ. ಆಡಳಿತ ಮಂಡಳಿಯ ಮಹಿಳಾ ಸ್ಥಾನದಿಂದ ಸರಳಾ ಜಿ. ಭಾಂಡಗೆ ಹಾಗೂ ಸೀಮಾ ಲದವಾ ಅವಿರೋಧವಾಗಿ ಆಯ್ಕೆಯಾಗಿದ್ದು, ಹಿಂದುಳಿದ `ಅ’ ವರ್ಗದಿಂದ ಸ್ಪರ್ಧಿಸಿದ್ದ ನಾರಾಯಣ ಎಸ್. ಜರತಾರಘರ 805, ಮತಗಳಿಂದ ಆಯ್ಕೆಗೊಂಡಿದ್ದು, ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿಠ್ಠಲ ಪಿ. ಲದವಾ 839, ಅರುಣ h ಇರಕಲ್ಲ 777, ದೀಪಕ ಪಿ ಮಗಜಿಕೊಂಡಿ 775, ನಾರಾಯಣ ಯು ಬದ್ದಿ 768, ಸುನೀಲ ಬಿ ವಾಳ್ವೇಕರರವರು 768, ನಾರಾಯಣ ಎನ್. ಖೋಡೆ 762, ಹಾಗೂ ಪ್ರಕಾಶ ಎಂದ ಬುರಬುರೆ 755, ಮತಗಳಿಂದ ಆಯ್ಕೆಗೊಂಡಿರುತ್ತಾರೆ. ರಿಟರ್ನಿಂಗ್ ಅಧಿಕಾರಿಗಳು ನಡೆಸಿ ಎಣಿಕೆ ಕಾರ್ಯದ ನಂತರ ಫಲಿತಾಂಶವನ್ನು ಘೋಷಿಸಿದರು.