ಎಸ್.ಎಸ್.ಎ. ಶಿಕ್ಷಕ ವೃಂದದಿಂದ ವೇತನಕ್ಕಾಗಿ ಧರಣಿ

ವಿಜಯಪುರ :ಜೂ.4: ವಿಜಯಪುರ ಗ್ರಾಮೀಣ ವಲಯದಲ್ಲಿ ಕಾರ್ಯನಿರ್ವಹಿಸುವ ಎಸ್.ಎಸ್.ಎ.ದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ, ಸಿ.ಆರ್.ಪಿ. ಹಾಗೂ ಬಿ.ಆ.ಪಿ. ಇದಲ್ಲದೆ ಆರ್.ಎಂ,.ಎಸ್.ಎ ದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ ವೃಂದದವರಿಗೆ ಮೂರು ತಿಂಗಳ ವೇತನ ನೀಡುವಂತೆ ಆಗ್ರಹಿಸಿ ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಮುಂದೆ ಎಸ್.ಎಸ್.ಎ. ಶಿಕ್ಷಕರಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಧರಣಿ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆಂಜನೇಯ ಅವರು ಕಳೆದ ಮೂರು ತಿಂಗಳಿನಿಂದ ಸಂಕಷ್ಟದಲ್ಲಿರುವ ಎಸ್.ಎಸ್.ಎ. ಶಿಕ್ಷಕರ ನೋವು ನಮಗೆ ಗಮನದಲ್ಲಿದೆ. ಆ ನಿಟ್ಟಿನಲ್ಲಿ ಕಳೆದ 15 ದಿನಗಳಿಂದ ನಾವು ಕೂಡ ಪ್ರಯತ್ನಿಸುತ್ತಿದ್ದು, ಬರುವ ವಾರ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ನಂತರ ಒಂದು ವಾರದ ಮಟ್ಟಿಗೆ ಎಸ್.ಎಸ್.ಎ. ಶಿಕ್ಷಕರು ಧರಣಿ ಸತ್ಯಾಗ್ರಹವನ್ನು ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಎಸ್.ಎಸ್.ಎ. ಶಿಕ್ಷಕ ವೃಂದದ ಎಚ್.ಕೆ. ಬೂದಿಹಾಳ ಹಾಗೂ ಚನ್ನಯ್ಯ ಮಠಪತಿ ಅವರು ಜಂಟಿಯಾಗಿ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ವೇತನ ವಿಲ್ಲದೇ ಪರದಾಡುತ್ತಿದ್ದು, ಆರ್ಥಿಕವಾಗಿ ತುಂಬಾ ಕಷ್ಟಕರವಾಗಿದೆ. ಸದ್ಯ ಮಕ್ಕಳನ್ನು ಶಾಲೆಗೆ ಕಳುಹಿಸುವ, ಮನೆ ಬಾಡಿಗೆ, ದಿನನಿತ್ಯದ ಖರ್ಚು ವೆಚ್ಚಗಳಿಗೆ ತೊಂದರೆ ಉಂಟಾಗುತ್ತಿದೆ. ಈ ವಿಳಂಬ ನೀತಿಯಿಂದ ಎಲ್ಲ ಶಿಕ್ಷಕ ವೃಂಧಕ್ಕೆ ಕಾರ್ಯನಿರ್ವಹಿಸುವದು ಬೇಸರವನ್ನುಂಟು ಮಾಡಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಸಂತೋಷ್ ಕುಲಕರ್ಣಿ, ನಿಜಪ್ಪ ಮೇಲಿನಕೇರಿ, ಮಲ್ಲಿಕಾರ್ಜುನ ಬೂಸಗೊಂಡ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅಕ್ಕುಬಾಯಿ ನಾಯಕ, ಶ್ರೀಮತಿ ಕವಿತಾ ಕಲ್ಯಾಣಪ್ಪಗೋಳ, ಶ್ರೀಮತಿ ಶೋಭಾ ಮೆಡೆಗಾರ, ಶ್ರೀಮತಿ ಲಕ್ಷೀ ತೊರವಿ, ಶ್ರೀಮತಿ ರೂಪಾ ಕರದಿನ, ಉದಯಕುಮಾರ ಕೋಟ್ಯಾಳ, ಬಸವರಾಜ ಅಮರಪ್ಪಗೋಳ, ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಎಚ್.ಎಂ. ಚಿತ್ತರಗಿ, ವಿಜಯಕುಮಾರ ಔತಾಳೆ, ಸುದರ್ಶನ ಜೇವೂರ,ಆರ್,ಎಂ,ಪಾಟೀಲ, ಹಣಮಂತ ಕಾತರಕಿ.ವಿಶ್ವನಾಥ ಮೇತ್ರಿ, ಶ್ರೀಶೈಲ ದೊಡ್ಡಮನಿ, ಅಶೋಕ ಬನಸೋಡೆ,ಸಿದ್ದು ಕನ್ನೂ, ನೀಲಪ್ಪ ತಿಮ್ಮಾಪೂರ, ಮಂಜುನಾಥ ನೇಬಗೇರಿ, ಶಂಕರ ತಳವಾರ, ಎಂ,ಎಸ್,ಟಕ್ಕಳಕಿ, ಸಾಬು ಗಗನಮಾಲಿ, ಅಶೋಕ ಚನ್ನಬಸಗೋಳ, ಅಶೋಕ ಭಜಂತ್ರಿ, ಗ್ರಾಮೀಣ ವಲಯದ ಸಿ,ಆರ್,ಪಿ, ಹಾಗೂ ಬಿ,ಆರ್,ಪಿಗಳು ಧರಣಿಯಲ್ಲಿ ಭಾಗವಹಿಸಿದ್ದರು.