ಎಸ್.ಎಸ್.ಎಲ್.ಸಿ.(ಸಿ.ಬಿ.ಎಸ್ಸಿ) ಫಲಿತಾಂಶದಲ್ಲಿ ಶೇ: 93% ಫಲಿತಾಂಶ


ಸಂಜೆವಾಣಿ ವಾರ್ತೆ
ಸಂಡೂರು :ಜು:24  ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಕೇಂದ್ರೀಯ ಪಠ್ಯದ ಎಸ್.ಎಸ್.ಎಲ್.ಸಿ.(ಸಿ.ಬಿ.ಎಸ್ಸಿ) ಫಲಿತಾಂಶದಲ್ಲಿ ಶೇ: 93% ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಗೈಯುವ ಮೂಲಕ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.    
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಸನಾವುಲ್ಲಾ ಎಂ.ಪಿ. ಅವರು ಮಾಹಿತಿ ನೀಡಿ ಒಟ್ಟು 09 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 46 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 30 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕರು ಹಾಗೂ ಎಲ್ಲಾ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಅತಿ ಹೆಚ್ಚಿ ಅಂಕಗಳನ್ನು ಪಡೆದ ಪ್ರಜ್ಞಾ ಜೆ.ಎಂ. 94.4%, 500/472, ನಯನ ಬಿ 92.00% 500/460, ಜಿ.ಶರಣಬಸವರಾಜ ಮತ್ತು ವಿನಯ ಎಸ್.ಸಿಂಧೆ 89.8%, 500/449 ಅಂಕಗಳನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾರೆ.

Attachments area