ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಚರ್ಚೆ

ಜಗಳೂರು.ಮಾ.೨೧: ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ ವತಿಯಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಚರ್ಚೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಶಾಸಕ ಎಸ್ ವಿ ರಾಮಚಂದ್ರ ಕಾರ್ಯಕ್ರಮ ಉದ್ಘಾಟನೆ ಮಾಡಿ ನಂತರ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು ವಿದ್ಯೆ ಕಲಿಯಲು ಶ್ರೀಮಂತ ಬಡವ ಎಂಬ ಬೇಧವಿಲ್ಲದೆ ಪ್ರತಿಯೊಬ್ಬರು ಕೂಡ ಶಿಕ್ಷಣವಂತರಾಗಲು ಸರ್ಕಾರಗಳು ಸಮಾನ ಶಿಕ್ಷಣ ಜಾರಿಗೆ ತಂದಿವೆ , ವಿದ್ಯಾರ್ಥಿಗಳು ಪರೀಕ್ಷೆ ವೇಳೆಯಲ್ಲಿ ಸಮಯ ಕಾಲಹರಣ ಮಾಡದೇ ಅಭ್ಯಾಸ ಮಾಡುವ ಮೂಲಕ ಪರೀಕ್ಷೆಗೆ ತಯಾರಾಗಿ  ಪರೀಕ್ಷೆ ಎದುರಿಸಿ ಎಂದು ಕಿವಿ ಮಾತು ಹೇಳಿದರು , ಶಿಕ್ಷಣ ಇಲಾಖೆ ಪ್ರತಿ ವರ್ಷವು ಕೂಡ ವಿದ್ಯಾರ್ಥಿಗಳಿಗೆ ಭವಿಷ್ಯದ ತಿರುವಿನ ಘಟ್ಟ ಬದಲಾಗಲು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಭಯಮುಕ್ತವಾಗಿ ಬರೆಯಲು ಕಾರ್ಯಗಾರ ಮಾಡುತ್ತಿದೆ ಈ ಕಾರ್ಯಗಾರವನ್ನ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು ,ಜಿಪಂ ಸದಸ್ಯ ಎಸ್ ಕೆ ಮಂಜುನಾಥ ಮಾತನಾಡಿ   ಏಕಾಗ್ರತೆಯಿಂದ ಅಭ್ಯಾಸ ಮಾಡುವ ಮೂಲಕ ಮಾನಸಿಕ ಸದೃಢರಾಗಿ ಪರೀಕ್ಷೆ ಎದುರಿಸುವಂತೆ ಸಲಹೆ ನೀಡಿದರು ಗುರುಗಳ ಮಾರ್ಗದಂತೆ ವ್ಯಕ್ತಿತ್ವ ವಿಕಾಸವಾಗಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವ ಮೂಲಕ ಉನ್ನತ ವಿದ್ಯಾಭ್ಯಾಸ ಮಾಡಿ ತಮ್ಮ ಶಾಲೆಗೆ ಕೀರ್ತಿ ತರಬೇಕೆಂದರು ಎಂದರು ಕ್ಷೇತ್ರ ಶಿಕ್ಷಣ ಅಧಿಕಾರಿ ವೆಂಕಟೇಶ್ ಪ್ರಾಸ್ತವಿಕವಾಗಿ ಮಾತನಾಡಿದರು, ಈ ಸಂದರ್ಭದಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದೆಶ್  ಪಪಂ ಅಧ್ಯಕ್ಷ ಆರ್ ತಿಪ್ಪೆಸ್ವಾಮಿ, ಪಪಂ ಉಪಾಧ್ಯಕ್ಷೆ ಲಲಿತಾ, ಚಟ್ನಹಳ್ಳಿ ರಾಜಣ್ಣ, ಮುಖ್ಯಾ ಉಪಾಧ್ಯಾಯರಾದ ಬಾಬುರೆಡ್ಡಿ, ಡಿಡಿ ಹಾಲಪ್ಪ,ಮುಂತಾದವರು ಹಾಜರಿದ್ದರು