ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಸತಿ ಸಹಿತ ಕಾರ್ಯಗಾರ


ನರಗುಂದ,ಫೆ.6: ತಾಲೂಕಿನ 35 ಪ್ರೌಢಶಾಲೆಗಳ ಎಸ್‍ಎಸ್‍ಎಲ್‍ಸಿ ಮೇಧಾ ವಿ ವಿದ್ಯಾರ್ಥಿಗಳಿಗೆ ಹುಣಶೀಕಟ್ಟಿ ಗ್ರಾಮದ ರಾಮಪ್ಪ ಯಡಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ ಡಿಎಮ್‍ಸಿ ಸಹಯೋಗದೊಂದಿಗೆ ಶಿಕ್ಷಣ ಇಲಾಖೆ. ಪ್ರೌಢಶಾಲಾ ಸಹಶಿಕ್ಷಕರ ಸಂಘ ಹಾಗೂ ಮಾಧ್ಯಮಿಕ ಶಾಲಾ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ 5 ದಿನಗಳ ವಸತಿ ಸಹಿತ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ಹುಣಶೀಕಟ್ಟಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಎಸ್‍ಡಿಎಮ್‍ಸಿ ಸಮಿತಿ ಸ್ವಯಂಪ್ರೇರಣೆಯಿಂದ ಮುಂದೆ ಬಂದು ತಾಲ್ಲೂಕಿನ 35 ಪ್ರೌಢಶಾಲೆಗಳ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವ ದಿಶೆಯಲ್ಲಿ ವಿದ್ಯಾರ್ಥಿಗಳ ಹಣೆಬರಹ ಗಟ್ಟಿಗೊಳಿಸುವ ಮಹತ್ತರ ಜವಾಬ್ದಾರಿ ತೆಗೆದುಕೊಂಡಿದ್ದೀರಿ ನಿಮ್ಮ ಈ ಹೃದಯ ವೈಶಾಲ್ಯತೆಗೆ ಶಿಕ್ಷಣ ಇಲಾಖೆ ಹಾಗೂ ನಾನು ಸದಾಕಾಲ ಚಿರಋಣಿಯಗಿರುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಎಸ್‍ಡಿಎಮ್‍ಸಿ ಕಾರ್ಯವನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳು ಜ್ಞಾನದ ಹಂಬಲ ಇಟ್ಟುಕೊಂಡು ಕಲಿಕಾ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪರಿಶ್ರಮ ವಹಿಸಿದ್ದೆ ಆದರೆ ಈ ಶಿಬಿರ ಯಶಸ್ವಿಯಾಗಲು ಸಾಧ್ಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿಎಫ್ ಮಜ್ಜಗಿ ನುಡಿದರು. ತಾಲೂಕ ಪಂಚಾಯತ್ ಅಧಿಕಾರಿ ಇನಾಮಾದಾರ್ ತಾಲೂಕ ದಂಡಾಧಿಕಾರಿ ಶ್ರೀಶೈಲ ತಳವಾರ ಮಾತನಾ ಡಿದರು.
ಎಸ್‍ಡಿಎಮ್‍ಸಿ ಅಧ್ಯಕ್ಷ ಡಿಎಸ್ ಮುಳ್ಳೂರ್ ಕಾರ್ಯಾಗಾರ ಉದ್ಘಾಟಿಸಿದರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೋಭಾ ಮುಳ್ಳೂರ ಅಧ್ಯಕ್ಷತೆ ವಹಿಸಿದ್ದರು ಎಸ್‍ಡಿ ಎಮ್‍ಸಿ ಉಪಾಧ್ಯಕ್ಷೆ ಶಾಂತವ್ವ ದೇವಕ್ಕಿ, ಸದಸ್ಯ ಜಡಿಯಪ್ಪಗೌಡ್ರ, ಮುಖ್ಯ ಶಿಕ್ಷಕ ಅಲಕ್ಕನವರ, ಚೂರಿ ಸರ್ ಅಕ್ಷರ ದಾಸೋಹ ಅಧಿಕಾರಿ ಆನಂದ ಭೋವಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್‍ಎಲ್ ಮರೀಗೌಡ್ರ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಝೆಡ್‍ಎಮ್ ಖಾಝಿ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಪಿಸಿ ಕಾಲಾಹಳ ಉಪಸ್ಥಿತರಿದ್ದರು. ಶಿಕ್ಷಕ ಜಿ.ಏನ್ ದೊಡ್ಡಲಿಂಗಪ್ಪನವರ ಕಾರ್ಯಕ್ರಮ ನಿರೂಪಿಸಿದರು ಪವಾಡಶೆಟ್ಟರ್ ವಂದಿಸಿದರು.