ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಗಾರ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.23:  ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ  ವತಿಯಿಂದ ಎಸ್.ಎಸ್.ಎಲ್. ಸಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಗಾರವನ್ನು ನಡೆಸಲಾಯಿತು.
 ಎಸ್.ಎಸ್.ಎಲ್.ಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಮೊದಲ ಘಟ್ಟವಾಗಿದೆ. ಈ ಪರೀಕ್ಷೆಯು ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶೈಕ್ಷಣಿಕ ಜೀವನದ ಮಾರ್ಗಸೂಚಿಯಂತೆ ಕೆಲಸ ಮಾಡುವುದಲ್ಲದೇ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಆದ್ದರಿಂದ, ಈ ಘಟ್ಟದಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಹಲವಾರು ಇಂತಹ ಕಾರ್ಯಗಾರ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವಿವಿಧ ಮತ್ತು ವಿನೂತನ ಕ್ರಿಯಾಯೋಜನೆ ತಯಾರಿಸಿಕೊಳ್ಳಲು ಅತ್ಯಂತ ಪ್ರಮುಖವಾಗಿವೆ ಎಂದು ಡಿ.ವೈ.ಎಸ್.ಪಿ‌ ವೆಂಕಟೇಶ್ ತಿಳಿಸಿದರು.
 ಉತ್ತಮ ಶೈಕ್ಷಣಿಕ ನಾಯಕತ್ವ, ಶಿಕ್ಷಕರ ಇಚ್ಛಾಶಕ್ತಿ, ಹೊಸಬಗೆಯ ಪ್ರಯೋಗಗಳ ಅನುಷ್ಠಾನ, ಪೋಷಕರು ಹಾಗೂ ಸ್ಥಳೀಯ ಸಮುದಾಯಗಳು ಶಾಲೆಯೊಂದಿಗೆ ಹೊಂದಿರುವ ಸಕ್ರಿಯ ಸಹಭಾಗಿತ್ವ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಖಾತ್ರಿಪಡಿಸಲು ಕಾರಣವಾದ ಅಂಶಗಳಾಗಿವೆ. ಇವುಗಳ ಜೊತೆ ವಿದ್ಯಾರ್ಥಿಗಳಿಗೆ ಗರಿಷ್ಠ ಕಲಿಕಾವಕಾಶ ಸಮಯ ಲಭ್ಯವಾಗುವಂತೆ ಮಾಡುವುದೂ ಸಹ ಪ್ರಮುಖ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ಮತ್ತು ಕುಟುಂಬಗಳಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗುವ ಕಲಿಕಾವಕಾಶ ಸಮಯ ಹಾಗೂ ಅದರ ಪ್ರಾಮುಖ್ಯತೆಯ ಕುರಿತು ಒಂದಿಷ್ಟು ಚರ್ಚಿಸುವುದು ಮತ್ತು ಶೈಕ್ಷಣಿಕ ಕ್ಷೇತ್ರದ ವಿವಿಧ ಹಂತಗಳಲ್ಲಿ ಅನುಷ್ಠಾನಗೊಂಡ, ಶಾಲೆಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಭಾವಿಸಬಹುದಾದ ಒಟ್ಟು ಶೈಕ್ಷಣಿಕ ಕಾರ್ಯಗಾರ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅನುಕುಲವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರ್ರಪ್ಪ ಹೇಳಿದರು.
 ಅದರ್ಶ ವ್ಯಕ್ತಿಗಳಾದ ಪುಸ್ತಕಗಳನ್ನು ಓದುವುದಿಂದ ಮುಂದಿನ ದಿನಗಳಲ್ಲಿ ಅದರ್ಶ ವಿದ್ಯಾರ್ಥಿಗಳಾಗಿ ಬೆಳೆಯಲು ಸಾದ್ಯವಾಗುತ್ತದೆ ಎಂದು ತಾಲುಕು ಪಂಚಾಯಿತಿ ಮುಖ್ಯಧಿಕಾರಿ ಮಡಗಿನ ಬಸಪ್ಪ ತಿಳಿಸಿದರು.
  ಸಂಪನ್ಮೂಲ ವ್ಯಕ್ತಿಗಳಾದ ಹೀರೆಮಠ, ಅರೋಣ್ ಕುಮಾರ್, ಶರಣ ಬಸವ, ಸಿದ್ದಲಿಂಗಪ್ಪ, ಕ್ಷೇತ್ರ ಸಮನ್ವಯಧಿಕಾರಿ ತಮ್ಮನಗೌಡ ಪಟೀಲ್, ಶಾಲೆಯ ಮುಖ್ಯಗುರು ವೇಂಕಟೇಶ್ ಯಾದವ್, ಕ.ಕಾ.ನಿ.ಪ ಜಿಲ್ಲಾ ಸಂಘದ ಸದಸ್ಯ ರಮೇಶ್, ಕ.ಕಾ.ನಿ.ಪ ತಾಲುಕು ಘಟಕದ ಅಧ್ಯಕ್ಷ ಅರ್.ಬಸವರೆಡ್ಡಿ, ರಾಜೀವ ಐರಣಿ ಪ್ರಧಾನ ಕಾರ್ಯದರ್ಶಿ ಹಾಗೂ ಕ.ಕಾ.ನಿ.ಪ ತಾಲುಕು ಘಟಕದ ಸದಸ್ಯರು ಇದ್ದರು.