ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಾಸನ ಕಾರ್ಯಕ್ರಮ

????????????????????????????????????

ಸಿರುಗುಪ್ಪ ಮಾ 30 : ನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಾಸನ ಕಾರ್ಯಕ್ರಮ ನಡೆಯಿತು.
ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಪಡೆದಿರುವ ಬಸವರಾಜ ಉಮ್ರಾಣಿಯವರು ವಿಶೇಷ ಉಪನ್ಯಾಸದಲ್ಲಿ ವಿದ್ಯಾರ್ಥಿಗಳು ಓದುವ ಸಮಯದ ವೇಳಾಪಟ್ಟಿಯನ್ನು ತಯಾರಿಸಿಕೊಂಡು ನಿಶಬ್ದ ವಾತಾವರಣದಲ್ಲಿ ಅಥವಾ ಪ್ರಶಾಂತ ಪ್ರದೇಶದಲ್ಲಿ ಗಮನವಿಟ್ಟು ಪುಸ್ತಕಗಳನ್ನು ಓದಬೇಕು, ವಿದ್ಯಾರ್ಥಿಗಳು ಪರೀಕ್ಷೆಯ ಭಯವನ್ನು ಬಿಟ್ಟು ನಿರಂತರ ಅಭ್ಯಾಸ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಎರಡು ಕಣ್ಣಿಲ್ಲದಿದ್ದರೂ ಮಕ್ಕಳು ಕೇಳುವ ಪ್ರಶ್ನೆಗಳಿಗೆ ವ್ಯವಕಲನ, ಸಂಕಲನ, ಭಾಗಾಕಾರ, ಹಾಗೂ ಗುಣಾಕಾರದಂತಹ ಲೆಕ್ಕಗಳಿಗೆ ಯಾವುದೇ ತಂತ್ರಜ್ಞಾನಗಳನ್ನು ಬಳಸದೇ ಬಾಯಿಂದನೇ ಪಟಪಟನೇ ಉತ್ತರ ಹೇಳುವುದರ ಮೂಲಕ ಮಕ್ಕಳಲ್ಲಿ ಕುತೂಹಲವನ್ನುಂಟು ಮಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಬಸವರಾಜ ಉಮ್ರಾಣಿಯವರಿಗೆ ಶಾಲೆಯ ಎಲ್ಲಾ ಶಿಕ್ಷಕ ವೃಂದದವರಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ವೆಂಕಟೇಶ ಯಾದವ್, ಜೀವವಿಮೆ ಅಭಿವೃದ್ದಿ ಅಧಿಕಾರಿ ರಾಜೇಂದ್ರ ನಾಯಕ, ಸಹಶಿಕ್ಷಕರಾದ ವಿಜಯ¯ಕ್ಷ್ಮಿ, ಟಿ.ಆರ್.ಭಾರತಿ, ಈರಮ್ಮ, ಜೀವೇಶ ಕುಲಕರ್ಣಿ, ವೀಣಾ, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.