ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ಪುನಃಶ್ಚೇತನ ಕಾರ್ಯಾಗಾರ

ಬಾದಾಮಿ,ಮಾ12: ತಾಲೂಕಿನ ಮುಷ್ಟಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ(ಕೆ.ಪಿ.ಎಸ್)ಯಲ್ಲಿ ಗ್ರಾಮೀಣ ಅಭಿವೃದ್ಧಿ ಸೇವಾ ಸಮಿತಿಯ ವತಿಯಿಂದ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ವ್ಯಾಖ್ಯಾನ ಮಾಲೆ 10 ದಿನಗಳ ಉಚಿತ ಪುನಃಶ್ಚೇತನ ಕಾರ್ಯಾಗಾರ ಆರಂಭವಾಯಿತು.
ಮುತ್ತಲಗೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎಚ್.ಕೊನೇರಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕೆ.ಪಿ.ಎಸ್.ಶಾಲೆಯ ಮುಖ್ಯಶಿಕ್ಷಕಿ ಎಲ್.ಆರ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕರಡಿಗುಡ್ಡ ಶಾಲೆಯ ಮುಖ್ಶಶಿಕ್ಷಕ ಉಜ್ವಲ ಬಸರಿ, ಬಿ.ಆರ್.ಕುಲಕರ್ಣಿ, ಎನ್.ಬಿ.ಬಾಗೇವಾಡಿ, ಎಸ್.ಆರ್.ಕರನಂದಿ, ಎಸ್.ಇ.ನಾಯ್ಕರ, ಎಲ್.ಎಸ್.ಕೊನೇರಿ, ಬಿ.ಎಸ್.ಅಮಾತೆಪ್ಪನ್ನವರ ಭಾಗವಹಿದ್ದರು. ವೈ.ಡಿ.ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಜೆ.ದೇಸಾಯಿ ಸ್ವಾಗತಿದರು. ಖ.ಬಿ.ನಾಯ್ಕರ ನಿರೂಪಿಸಿದರು. ಜಗದೀಶ ಬಡಿಗೇರ ವಂದಿಸಿದರು.