ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಅಫಜಲಪುರ: ಜು.26:ಪಟ್ಟಣದ ಹಿಂಗಲಾಂಬಿಕ ಕಲ್ಯಾಣ ಮಂಟಪದಲ್ಲಿ ತಾಲೂಕ ಭಾವಸಾರ ಕ್ಷತ್ರಿಯ ಸಮಾಜ ತಾಲೂಕ ಘಟಕದ ವತಿಯಿಂದ 2022ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಹಾಗೂ ಪಿ.ಯು.ಸಿ.ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅಗ್ರಶೇಣಿಯಲ್ಲಿ ಪಾಸಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೇ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರಿಗೂ, ಮತ್ತು ಸರಕಾರಿ ಸೇವೆಯಲ್ಲಿ ನಿವೃತ್ತಿ ಹೊಂದಿರುವ ಹಾಗೂ ದಾನಿಗಳನ್ನು ಸನ್ಮಾನಿಸಿ ಸತ್ಕರಿಸಲಾತಿತು.

ಕಾರ್ಯಕ್ರಮದಲ್ಲಿ ಭಾವಸಾರ ಸಮಾಜದ ತಾಲೂಕಾಧ್ಯಕ್ಷರಾದ ಶ್ರೀ ಗುರುನಾಥ ಲೋಖಂಡೆ ಉಪಾಧ್ಯಕ್ಷರಾದ ಸ್ವಾಮಿನಾಥ ಅಂಬೂರೆ, ಜ್ಯೋತಿ ಸಂದೀಪ ಅಂಬೂರೆ, ಮಾರುತಿ ಗನಾತೆ,ದೇವಿದಾಸ ಅಂಬೂರೆ, ವಿಜಯಕುಮಾರ ಅಂಬೂರೆ, ರತ್ನಕರ್ ಅಂಬೂರೆ, ಡಾ.ಶಿವಾಜಿ ಲೋಖಂಡೆ, ಡಾ.ಸುಶೀಲ ಅಂಬೂರೆ, ಧನ್ಯ ಕುಮಾರ ಅಂಬೂರೆ, ಕುಮಾರಿ ಶಿವಾನಿ ಅಂಬೂರೆ ನಿರೂಪಿದರು, ಕಾರ್ಯಕ್ರಮದಲ್ಲಿ ತಾಲೂಕ ಭಾವಸಾರ ಸಮಾಜದ ಹಿರಿಯರು, ಮುಖಂಡರು, ಯುವಕರು, ಮಹುಳೆಯರು ಸೇರಿದಂತೆ ಅನೇಕರಿದ್ದರು.