ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆ ಮುಂದಾದ ಜಿಲ್ಲಾ ಅಧಿಕಾರಿಗಳು

 ಹರಿಹರ ಜ 13 ;  ಹರಿಹರದ ಮೌಲಾನಾ ಆಜಾದ ಮಾದರಿ ಶಾಲೆಯ  ಹತ್ತನೇ ತರಗತಿಯ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಫಲಿತಾಂಶ ಹೆಚ್ಚಳಕ್ಕೆ ವಿದ್ಯಾರ್ಥಿಗಳಿಂದಲೇ  ದೂರದರ್ಶನ (ಟಿವಿ) ಕಟ್ಟಿಸುವ ಅಭಿಯಾನಕ್ಕೆ  ದಾವಣಗೆರೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಲ್ಲಿಕಾರ್ಜುನ್ ಮಠದ್ ತಂಡ ಮುಂದಾಗಿದ್ದಾರೆ.  ಟಿಪ್ಪು ನಗರ, ಗಾಂಧಿನಗರ ಸೇರಿದಂತೆ ವಿವಿಧ ಬಡಾವಣೆಗಳ ಮನೆ ಮನೆಗೆ ತೆರಳಿ ಪೋಷಕರು ವಿದ್ಯಾರ್ಥಿಗಳ ಮನವೊಲಿಸುವ ಕಾರ್ಯವನ್ನು ಮಾಡಿದರು.ಈ ವೇಳೆ ಮಾತನಾಡಿದ ಅವರು ಆಧುನಿಕ ಮಾಧ್ಯಮಗಳಾದ ಮೊಬೈಲ್‌, ಇಂಟರ್‌ನೆಟ್‌, ಫೇಸ್‌ಬುಕ್‌ ಚಟುವಟಿಕೆಗೆ ಒತ್ತು ಕೊಡುವಷ್ಟು ಪುಸ್ತಕಗಳ ಅಧ್ಯಯನಕ್ಕೆ ಯುವ ಸಮೂಹ ಪ್ರಾಮುಖ್ಯತೆ ನೀಡುತ್ತಿಲ್ಲ ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಗಳ ಪೂರ್ವದಲ್ಲಿ ವ್ಯಾಸಂಗ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಮನುಷ್ಯನ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಚನ್ನಾಗಿ ವಿದ್ಯಾಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ವಿದ್ಯಾರ್ಥಿ ಜೀವನ ಬದುಕಿನಲ್ಲಿ ಒಂದು ಸಾರಿ ಮಾತ್ರ ಬರುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಒಳ್ಳೆಯ ನಿರ್ಧಾರ ತಗೆದುಕೊಳ್ಳಬೇಕು. ಪುಸ್ತಕಗಳೆ ನಿಮ್ಮ ಸಹಪಾಠಿ ಆಗಬೇಕು ವಿದ್ಯೆ ಕಹಿಯಾದರೂ, ಫಲ ಕೊಟ್ಟಾಗ ಸಿಹಿ ದೊರೆಯುತ್ತದೆ. ಅನಾದಿಕಾಲದಿಂದಲೂ ಗುರು-ಶಿಷ್ಯ ಪರಂಪರೆ ಬೆಳೆದು ಬಂದಿದೆ. ಆದರೆ, ಇಂದು ಗುರುಗಳು-ವಿದ್ಯಾರ್ಥಿಗಳ ನಡುವೆ ಸಂಬಂಧ ಸರಿ ಇಲ್ಲ. ಮಕ್ಕಳಿಗೆ ಗುರುಗಳ ಬಗ್ಗೆ ಗೌರವ, ವಿನಯ ಇಲ್ಲ. ಸದಾ ಮಕ್ಕಳ ಏಳ್ಗೆಗೆ ಶ್ರಮಿಸುವರು ನಿಜವಾದ ಉಪನ್ಯಾಸಕರು, ಅಂಥವರ ಹಿತ ಕಾಯುವುದು, ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿ ಕರ್ತವ್ಯ ಎಂದು ಹೇಳಿದರು.ಉತ್ತಮ ಸಂವಹನ ಕಲೆ, ಕೌಶಲ್ಯ ಹೊಂದಿದವರು ಸುಲಭವಾಗಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಅಂಕ ಗಳಿಕೆ ಜತೆ ಮಕ್ಕಳಿಗೆ ಕೌಶಲ್ಯ, ಸಂವಹನ ಕಲೆ ವೃದ್ಧಿಸಲು ಹೆಚ್ಚು ಒತ್ತುಕೊಡಬೇಕು. ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಉಪನ್ಯಾಸಕರು ಅವರಲ್ಲಿ ಅರಿವು ಮೂಡಿಸುವ ಮೂಲಕ ಅವರಲ್ಲಿ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು  ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ಉತ್ತಮ ತಯಾರಿ ಜೊತೆಗೆ, ಪೋಷಕರು ತಮ್ಮ ಮಕ್ಕಳಿಗೆ ನೀಡುವ ನೈತಿಕ ಪ್ರೋತ್ಸಾಹ ಬಹುಮುಖ್ಯವಾಗಿದೆ ಎಂದರು.ಬೆಳಿಗ್ಗೆ ಓದಿದ ಮಾಹಿತಿಗಳನ್ನು, ರಾತ್ರಿ ಮಲಗುವ ಮುನ್ನ ಪುನರಾವರ್ತನೆ ಮಾಡಿ. ದೀರ್ಘಕಾಲ ನಿಮ್ಮ ನೆನಪಿನಲ್ಲಿ ಈ ಮಾಹಿತಿಗಳು ಉಳಿಯುತ್ತವೆ. ಈ ನಿಟ್ಟಿನಲ್ಲಿ ಮುಂಬರುವ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಓದುವ ಹವ್ಯಾಸ ಬಳಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು