ಎಸ್.ಎಸ್.ಎಲ್.ಸಿ. ಫಲಿತಾಂಶ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ


ಸಂಜೆವಾಣಿ ವಾರ್ತೆ
ಸಂಡೂರು, ಮೇ.09: 2023ರ ಮಾರ್ಚ್-ಏಪ್ರಿಲ್ ನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶ್ರೀಶೈಲೇಶ್ವರ ವಿದ್ಯಾಕೇಂದ್ರದ,ಶ್ರೀಶೈಲೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯನಾಜ್‍ನೀನ್ ಡಿ.ಎಸ್.ಎನ್ನುವ ವಿದ್ಯಾರ್ಥಿನಿಯು 625ಕ್ಕೆ 612 ಅಂಕಗಳನ್ನು ಪಡೆದು (97.92%) ಪಡೆಯುವುದರ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ವನ್ನು ಪಡೆದಿದ್ದಾಳೆ. ಅದೇರೀತಿ ಶೀಲಾ ಜಿ.  ಎನ್ನುವ ವಿದ್ಯಾರ್ಥಿನಿಯು625ಕ್ಕೆ 566 ಅಂಕಗಳನ್ನು ಪಡೆದು (90.56%) ಪಡೆಯುವುದರ ಮೂಲಕ ಶಾಲೆಗೆದ್ವಿತೀಯ ಸ್ಥಾನವನ್ನು ಪಡೆದಿದ್ದಾಳೆ. ಪ್ರವೀಣ್ ಕೆ.ಎನ್ನುವ ವಿದ್ಯಾರ್ಥಿಯು 625ಕ್ಕೆ 563 ಅಂಕಗಳನ್ನು ಪಡೆದು (90.08%) ಪಡೆಯುವುದರ ಮೂಲಕ ಶಾಲೆಗೆ ತೃತೀಯ ಸ್ಥಾನವನ್ನು ಪಡೆದಿದ್ದಾನೆ. ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಚಿದಂಬರ್ ಎಸ್.ನಾನಾವಟೆ ಹಾಗೂ ಸಂಸ್ಥೆಯ ಆಡಳಿತಾಧಿಕಾರಿಗಳಾದ ಕುಮಾರ್ ಎಸ್.ನಾನಾವಟೆಯವರು, ಶಾಲೆಯ ಮುಖ್ಯೋಪಾಧ್ಯಾಯರಾದ ಷಣ್ಮುಖರಾವ್ ಜಗತಾಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದುವರೆದು ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ಶಾಲೆಯು ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಬಂದಿರುವುದು ಹರ್ಷವೆನಿಸುತ್ತದೆ. ಇದಕ್ಕೆ ಕಾರಣರಾದ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕವೃಂದದವರುಕಾರ್ಯತತ್ಪರರಾಗಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಾಲೂಕಿಗೆ ಪ್ರಥಮ ಸ್ಥಾನವನ್ನು ತರುವುದರ ಜೊತೆಗೆ ನಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಇವರೆಲ್ಲರಿಗೂ ಧನ್ಯವಾದಗಳು ಎಂದು ಹರ್ಷದಿಂದ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಶ್ರೀಶೈಲೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಷಣ್ಮುಖರಾವ್ ಜಗತಾಪ ಮಾತನಾಡುತ್ತಾ.. ಒಟ್ಟು 81 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದು ಇದರಲ್ಲಿ ಅಗ್ರಶ್ರೇಣಿಯಲ್ಲಿ 09ಪ್ರಥಮ ಶ್ರೇಣಿಯಲ್ಲಿ 58, ದ್ವಿತೀಯ ಶ್ರೇಣಿಯಲ್ಲಿ 12, ಮತ್ತು 02 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು  ಶೇಕಾಡ ಫಲಿತಾಂಶ 97.53% ಆಗಿರುತ್ತದೆಂದು ತಿಳಿಸಿದರು.
ನಾಜ್‍ನೀನ್ ಡಿ.ಎಸ್.ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ, ಶೀಲಾ ಜಿ. ಕನ್ನಡ ಮಾಧ್ಯಮದಲ್ಲಿ ಶಾಲೆಗೆ ದ್ವಿತೀಯ ಪ್ರವೀಣ್ ಕೆ. ಕನ್ನಡ ಮಾಧ್ಯಮದಲ್ಲಿ ಶಾಲೆಗೆ ತೃತೀಯ