ಎಸ್ ಎಸ್ ಎಲ್ ಸಿ ಪ್ರತಿಭಾವಂತ ವಿದ್ಯಾರ್ಥಿಗಳ ಗೌರವ ಸನ್ಮಾನ ಸಂಪನ್ನ

ಭಾಲ್ಕಿ:ಜೂ.5: ತಾಲೂಕಿನ ಉಚ್ಛಾ ಗ್ರಾಮದ ಪೂಜ್ಯ ಶ್ರೀ ದಿವ್ಯಯೋಗಿ ಶ್ರೀ ಕಂಠಯ್ಯಾ ಸ್ವಾಮಿಗಳ ಲಿಂಗಯೋಗ ಧ್ಯಾನ ಮಂದಿರದಲ್ಲಿ 10ನೆಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಪಾಸದ ಗ್ರಾಮದ ವಿಧ್ಯಾರ್ಥಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಸವರಾಜ ವಾರದ ಹಿರಿಯರು ಉಚ್ಚ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶರಣ ಶ್ರೀ ಸೂರ್ಯಕಾಂತ ಗುಂಡಪ್ಪ ಪಾಟೀಲ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಲ್ಕಿ ಅವರು ಆಗಮಿಸಿದ್ದರು. ಶರಣ ಶ್ರೀ ನಾಗಭೂಷಣ ಮಾಮಡಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಭಾಲ್ಕಿ, ಸೋಮನಾಥ ಸಜ್ಜನಶೆಟ್ಟಿ ಶರಣರು ಉಚ್ಚ, ಅಜಿತ್ ಪಾಟೀಲ್ ಹೊನ್ನಳ್ಳಿ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡಿದ ಅವರು ಗ್ರಾಮದ ಯುವಕರು ಮುಂದಿನ ಪೀಳಿಗೆಗೆ ಹೇಗೆ ಮಾದರಿಯಾಗಬೇಕು, ಹಿರಿಯರನ್ನು ಗೌರವಿಸುವ ಮನೋಭಾವ ಇಂದಿನ ಯುವಕರಲ್ಲಿ ಜಾಗೃತಿ ಮೂಡಬೇಕು ಎಂದು ಹೇಳಿದರು. ಬಳಿಕ ಮಾತನಾಡಿದ ಎನ್. ಮಾಮಾಡಿ ಅವರು ಈ ರೀತಿಯ ಕಾರ್ಯಕ್ರಮಗಳು ಗ್ರಾಮದಲ್ಲಿ ಸಂಸ್ಕøತಿ ಮತ್ತು ಭಾತೃತ್ವವನ್ನು ಯುವಕರಲ್ಲಿ ಬೆಳೆಸುವ ಕಾರ್ಯವಾಗುತ್ತಿದೆ ಮತ್ತು ಯುವಕರಿಗೆ ವಿಧ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಅಂಕಗಳಿಸಿ ಉನ್ನತ ಸ್ಥಾನಕ್ಕೆ ಹೋಗಲು ಬೆನ್ನುತಟ್ಟುವ ಕೈಯಾಗಿ ಕೆಲಸ ಮಾಡುತ್ತಿದೆ. ಮಕ್ಕಳು ಇದನ್ನು ಪ್ರೇರಣೆಯಾಗಿ ತೆಗೆದುಕೊಂಡು ಇನ್ನು ಚೆನ್ನಾಗಿ ಓದಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸೋಮನಾಥ ಸಜ್ಜನ ಅವರು ಮಕ್ಕಳು ತಂದೆ ತಾಯಿಯರನ್ನು ಗೌರವಿಸಬೇಕು ಹಿರಿಯರನ್ನು ಗೌರವಿಸುವ ಮನೋಭಾವ ಹೊಂದಬೇಕು ಬರಿ ಮೊಬೈಲ್ ನಲ್ಲಿಯೇ ಜೀವನ ಕಳೆಯಬಾರದು ಇನ್ನು ಹೆಚ್ಚು ಹೆಚ್ಚು ಓದಿನ ಕಡೆ ಗಮನ ಕೊಡಬೇಕು ಎಂದು ಎಚ್ಚರಿಸಿದರು. ಎಸ್.ಎಸ್.ಎಲ್.ಸಿ ಇದು ದೊಡ್ಡ ಸಾಧನೆಯಲ್ಲ ಸಾಧನೆಯ ಮೊದಲ ಮೆಟ್ಟಿಲು. ನೀವೆಲ್ಲ ಮೊಳಕೆ ಒಡೆದ ಸಸಿಗಳಾಗಿರುವಿರಿ ಇನ್ನು ಹೆಮ್ಮರವಾಗಿ ಬೆಳೆದು ಗ್ರಾಮಕ್ಕೆ ಕೀರ್ತಿ ತಂದು ಕೋಡಬೇಕಿದೆ. ಸಪ್ತ ಸದ್ಗುಣಗಳನ್ನು ಅಳವಡಿಸಿಕೊಂಡು, ದುರ್ಗುಣಗಳಿಗೆ ಬಲಿಯಾಗದೆ ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು. ಭಕ್ತಿ ದಾಸೋಹಿಗಳಾದ ಶರಣ ದಂಪತಿ ಶ್ರೀಮತಿ ಮಹಾದೇವಿ ಸೋಮನಾಥ ಸಜ್ಜನ ಉಚ್ಚ ಅವರು ಗುರುಬಸವ ಪೂಜೆ ನೆರವೇರಿಸಿದರು. ಶ್ರೀಮತಿ ಸುನೀತಾ ಶಿವಯೋಗಿ ಸ್ವಾಮಿ ಶ್ರೀಗಳ ಗದ್ದುಗೆ ಪೂಜೆ ನೆರವೇರಿದರು. ವೇದಿಕೆಯ ಮೇಲಿದ್ದ ಗಣ್ಯರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು. 2023-24 ನೆಯ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಗ್ರಾಮದ ವಿಧ್ಯಾರ್ಥಿಗಳಿಗೆ 1. ಸಾರಿಕಾ ರವೀಂದ್ರ ಮೇತ್ರೆ 576/625 92.16%,

 1. ಸ್ನೇಹ ರಾಜಪ್ಪ ಹುಣಜೆ 542/ 625 86.72%
 2. ಗಂಗೋತ್ರಿ ರವಿ ಪಂಚಾಳ್ 518/625 82.88%,
 3. ಸ್ಪೂರ್ತಿ ವಿಶ್ವನಾಥ್ ನೌಬಾದೆ 500/625 80%,
 4. ಆಕಾಶ ಅರವಿಂದ್ ಬಿರಾದಾರ್ 476/625 76.16%,
 5. ಶೈಲೇಶ್ ಚನ್ನಪ್ಪ ನಿಜಲಿಂಗೆ 487/625 77.92%,
 6. ಪ್ರಜ್ವಲ್ ವೆಂಕಟ್ ಸೇರಳೆ 475/625 76%,
 7. ವೀರೇಶ್ ಸೋಮನಾಥ್ ಸಜ್ಜನ್ 456/625 72.96%,
 8. ಸ್ನೇಹ ಸಂಜೀವ್ ಕುಮಾರ್ ಮಹಾಗಾವೇ 469/625 75.04%, 10. ನಂದಿನಿ ಪ್ರಕಾಶ್ ಮಳ್ಚಾಪುರೆ 432/625 69.12%,
 9. ಭವಾನಿ ನಾಗೇಶ್ ಸ್ವಾಮಿ 393/625 62.88%,
 10. ಸೃಷ್ಟಿ ರವಿ ವಾರದ 393/625 62.88%,
 11. ಸಾಯಿಬಗೊಂಡ ಲಕ್ಷ್ಮಣ ಶೆಡೋಳೆ 377/625 60.32%,
 12. ವಂದನಾ ನೀಲಕಂಠ 477/625 76.32% ,
 13. ಪ್ರಜ್ಞಾ ಪ್ರಶಾಂತ ಚಿದ್ರೆ 416/625 66.56% ,
 14. ಮಹಾದೇವಿ ಸಂಜಯ್ ಗಾಯಕ್ವಾಡ್ 412/625 65.92%,
 15. ರೋಹಿತ್ ರಮೇಶ್ ನಂದಗಾವೆ 375/625 60%. ಇವರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಶ್ರೀದೇವಿ ಶಾಂತಯ್ಯ ಸ್ವಾಮಿ ವಚನ ಗಾಯನ ಮಾಡಿದರು. ಕವನಾ ಸ್ವಾಮಿ ಭಕ್ತಿ ಗೀತೆ ಹಾಡಿದರು. ಚಂದನಾ ಸ್ವಾಮಿ ವಂದಿಸಿದರು. ಶಾಂತಯ್ಯ ಸ್ವಾಮಿ ಸ್ವಾಗತಿಸಿದರು. ಸಿದ್ಧಲಿಂಗ ಸ್ವಾಮಿ ನಿರೂಪಿಸಿದರು. ಶ್ರೀಮತಿ ಅಮರೇಶ್ವರಿ ವಾರದ ಶರಣು ಸಮರ್ಪಣೆ ತಿಳಿಸಿದರು. ಇದೇ ಸಂದರ್ಭದಲ್ಲಿ ಶರಣ ದಂಪತಿಗಳು ಶ್ರೀಮತಿ ಶ್ರೀ ಸೂರ್ಯಕಾಂತ ಗುಂಡಪ್ಪ ಪಾಟೀಲ್ ದಂಪತಿಗಳಿಗೆ ಅಭಿವಂದನೆ ಗೌರವ ಸನ್ಮಾನ ಮಾಡಲಾಯಿತು. ಭಕ್ತಿ ದಾಸೋಹಿಗಳಾದ ಶ್ರೀಮತಿ ಮಹಾದೇವಿ ಸೋಮನಾಥ ಸಜ್ಜನ್ ಅವರಿಗೂ ಸನ್ಮಾನ ಮಾಡಲಾಯಿತು. ಮಂಗಲ ಮತ್ತು ಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.