ಎಸ್.ಎಸ್.ಎಲ್.ಸಿ. ಪಿ.ಯು.ಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾಹಿತಿ


ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.24 ಯಜಿಲ್ಲಾ ಕೃಷಿ ತರಬೇತಿ ಕೇಂದ್ರ ವಡ್ಡರಟ್ಟಿ ಗಂಗಾವತಿಯಯಲ್ಲಿ ಕಪುಚಿನ್ ಕೃಷೀಕ ಸೇವಾ ಕೇಂದ್ರ ಸಹಯೋಗ ಚೈಲ್ಡ್‍ಫಡ್ ಇಂಡಿಯಾ ಯೋಜನೆಯ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾಹಿತಿಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಯಿತು.
ಪ್ರಾಸ್ಥಾವಿಕವಾಗಿ ಮಾತನಾಡಿದ ಪ್ರಕಾಶ ಕಡಗದ ಹಾಲಹಳ್ಳಿ ಇಂದಿನ ದಿನಮಾನಗಳಲ್ಲಿ ಯುವಕರ ಪಾತ್ರ ಬಹು ಮುಖ್ಯವಾಗಿದೆಎಂದ್ದು ತಿಳಿಸುತ್ತಾ ಎಸ್.ಎಲ್.ಸಿ ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾಹಿತಿಯ ತರಭೇತಿ ಕಾರ್ಯಕ್ರಮವನ್ನು ಎಸ್.ಎಸ್.ಎಲ್.ಸಿ. ಮಕ್ಕಳು ಮತ್ತು ಪಿ.ಯು.ಸಿ ಯುವಕರ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾಹಿತಿ ಎಂಬ ವಿಷಯದ ಕುರಿತು ಚರ್ಚಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಮೋಕಾಶಿ ಲಿಂಗಸೂರಸರ್ ಮಾತನಾಡಿ, ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾಹಿತಿಯ ತರಬೇತಿ ಮತ್ತು ಜೀವನದ ಗುರಿಯತ್ತ ಗಮನವಿರಲಿ. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ನಂತರದಲ್ಲಿ ಜೀವನದಲ್ಲಿ ಎನಾಗಬೇಕು ಎಂಬ ಗುರಿಯನ್ನು ನಿರ್ಧರಿಸಿಕೋಳ್ಳಿ. ಎಸ್.ಎಲ್.ಸಿ ಮತ್ತು ಪಿ.ಯು.ಸಿ ಶಾಲಾ ಜೀವನದಲ್ಲಿ ಕಲಿಯುವ ಹೋಸ ವಿಚಾರ ಮತ್ತು ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೋಳ್ಳುವತ್ತ ಹೆಚ್ಚಿನ ಗಮನ ವಹಿಸಿ. ವಿದ್ಯಾರ್ಥಿಜಿವನದಲ್ಲಿ ನೀವು ರೂಡಿಸಿಕೋಳ್ಳುವ ಮೌಲ್ಯ ನಿಮ್ಮ ಜೀವನದುದ್ದಕ್ಕೂ ಸಹಕಾರಿಯಾಗುತ್ತದೆ. ಜೀವನದಲ್ಲಿ ನಿಗದಿತಗುರಿಯುನ್ನು ತಲುಪಿ ಯಶಸ್ಸುನ್ನು ಸಾಧಿಸಲು ಉನ್ನತಧ್ಯೇಯ, ಮೌಲ್ಯ, ಮುಖ್ಯವಾಗಿ ಶಿಸ್ತು ಅತೀ ಮುಖ್ಯ. ಅದರಂತ್ತೆ ನಿವುಗಳು ನಿಮ್ಮ ನಿಮ್ಮ ಗುರಿಗಳನ್ನು ತಲುಪಲು ಶಿಕ್ಷಣ ಮಾರ್ಗದರ್ಶನ ಬಹಾಳ ಅವಶ್ಯಕವಾಗಿದೆಆದ್ದರಿಂದ್ದ ತಾವುಗಳು ಸರಿಯಾದ ವೃತ್ತಿ ಮಾರ್ಗದರ್ಶನದಲ್ಲಿಉತ್ತಮ&ಕೌಶಲ್ಯ ಬರಿತ ಶಿಕ್ಷಣವನ್ನು ಪಡೆಯಬೇಕುಎಂದು ತೀಳಿಸುತ್ತಾ ವೃತ್ತಿ ಶಿಕ್ಷಣದ ರ್ಚಾಟ್‍ಗಳನ್ನು ಪಿ, ಪಿ, ಟಿ, ಮೂಲಕ ಎಸ್.ಎಲ್.ಸಿ ಮತ್ತು ಪಿ.ಯು.ಸಿ ನಂತರದ ಕೋರ್ಸಗಳ ಮತ್ತು ಅವುಗಳಿಂದ ಸಿಗುವ ಲಾಭ ನಂಷ್ಠಗಳ ಕುರಿತು ಅವುಗಳಿಂದ ನಮ್ಮ ನಮ್ಮ ಮುಂದಿನ ದಿನಮಾನಗಳಲ್ಲಿ ವೃತ್ತಿಜಿವನ ಸಾಗಿಸಲಿಕ್ಕೆ ವೃತ್ತಿ ಶಿಕ್ಷಣ ಮಹತ್ವದಕುರಿತು ಸಂಪೂರ್ಣ ಮಾಹಿತಿ ವಿವರಿಸಿದರು. ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಬ್ಯಾಕಿಂಗ್, ಆಧುನಿಕ ಜಗತ್ತಿನ ಅವಶ್ಯಕ ವೃತ್ತಿ ಶಿಕ್ಷಣದ ಮಹತ್ವ ಮತ್ತು ಪ್ರಸ್ತುತ ಉದ್ಯೋಗದ ಲಬ್ಯತೆಯ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲಿ ಸಂಯೋಜಕ ಪ್ರಕಾಶಕಡಗದ ಹಾಲಹಳ್ಳಿ, ಸಂಸ್ಥೆಯ ವ್ಯವಸ್ಥಾಪಕರಾದ ಸದಾಶಿವ ಕಾಂಬಳೆ ಸಾಮಾಜಿಕ ಕಾರ್ಯಕತ್ರರಾದ ಮಂಜುನಾಥ ಸಾಗರ. ಮತ್ತು ಶಿವರಂಜಿನಿ ಯೋಜನೇಯ ಸ್ವಯಂ ಸೇವಕರಾದ ಮಾರುತಿ ಹೂಗಾರ ಕಮಲಾಕ್ಷಿ ವಿಜಯಲಕ್ಷ್ಮಿ ಹಿರೆಬೇಣಕಲ್, ಜೂನಿಯರ ಕಾಲೇಜ್ ಕಲಾ ವಿಬಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿಧ್ಯಾರ್ಥಿ ರಾಘವೇಂದ್ರ ಹೂಗಾರ ಮುಕ್ಕುಂಪಿ, ವಾಣಿಜ್ಯ ವಿಭಾಗದಲಿ ಎಮ್‍ಎನ್‍ಎಮ್ ಕಾಲೇಜ ುಗಂಗಾವತಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಕುಮಾರಿ ರಕ್ಷ ತಂದಿ ಬಿರಪ್ಪ ಚಿಕ್ಕಬೇಣಕಲ್ ಮುಂತಾದವರು ಹಾಜರಿದ್ದರು.