ಎಸ್.ಎಸ್.ಎಲ್.ಸಿ ಪರೀಕ್ಷೆ 2 ನಲ್ಲಿ ಉತ್ತಮ ಸಾಧನೆ ಮಾಡಲು ಸಲಹೆ

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 512;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ಭಾಲ್ಕಿ: ಮೇ.18:ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ 1 ರಲ್ಲಿ ಅನುತ್ತೀರ್ಣರಾದ ಹಾಗು ಸಿ, ಸಿ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ.
ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಶಿಕ್ಷಕರು ಇದನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಈಗಾಗಲೆ ಬರಗಾಲ ನಿಮಿತ್ಯ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟ ಪ್ರಾರಂಭವಾಗಿದೆ. ಈ ಬಿಸಿಯೂಟ ವಿಶೇಷ ತರಗತಿಗೆ ತುಂಬಾ ಉಪಯುಕ್ತಾವಾಗಿ ಪರಿಣಮಿಸಿದೆ.
ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ ಮತ್ತು ತಾಲೂಕು ಎಸ್‍ಎಸ್‍ಎಲ್‍ಸಿ ನೋಡಲ್ ಅಧಿಕಾರಿ ಸಹದೇವ.ಜಿ ರವರು, ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿ ವಿಶೇಷ ತರಗತಿಯ ಪರಿಶೀಲನೆ ನಡೆಸಿದರು.
ನಂತರ ಮತನಾಡಿದ ಅಧಿಕಾರಿಗಳು, ಎಸ್‍ಎಸ್‍ಎಲ್‍ಸಿ 2 ಪರೀಕ್ಷೆಯಲ್ಲಿ ಯಾರೂ ಅನುತ್ತೀರ್ಣರಾಗಬಾರದು, ಎಲ್ಲಾ ವಿದ್ಯಾರ್ಥಿಳು ಎ, ಎ ಪ್ಲಸ್, ಬಿ ಗ್ರೇಡ್ ಪಡೆಯುವಂತಾಗಬೇಕು. ಶಿಕ್ಷಕರು ರಜೆಯಲ್ಲಿ ಮಾಡಿದ ಕೆಲಸಕ್ಕೆ ಸರ್ಕಾರ ವಿಶೇಷ ಗಳಿಕೆ ರಜೆಗಳನ್ನು ನೀಡಲು ನಿರ್ಧರಿಸಿದೆ. ಹೀಗಾಗಿ ಶಿಕ್ಷಕರು ಯಾವುದೇ ನೆಪ ಹೇಳದೇ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ತಯ್ಯಾರು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಕಿರಣಕುಮಾರ ಭಾಟಸಾಂಗವಿ, ಶಿಕ್ಷಕರಾದ ಓಂ.ಝೆಡ್.ಬಿರಾದಾರ, ಪ್ರವೀಣ ಸಿಂಧೆ, ವಿಜಯಕುಮಾರ ಬಾಜೋಳಗಾ, ಶಿವಕುಮಾರ ವಾಡಿಕರ, ಶೋಭಾ ಮಾಸಿಮಾಡೆ ಇದ್ದರು.