ಎಸ್.ಎಸ್.ಎಲ್.ಸಿ. ಪರೀಕ್ಷೆ: ಟೋಲ್ ಫ್ರೀ ದೂರವಾಣಿ ಸೇವೆ ಆರಂಭ

ಕಲಬುರಗಿ,ಫೆ.24:ಕಲಬುರಗಿಯ (ಕೆ.ಕೆ.ಆರ್.ಡಿ.ಬಿ.) ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸಹಯೋಗದೊಂದಿಗೆ ಏಪ್ರಿಲ್-2023 ರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಟೋಲ್-ಫ್ರೀ ಸಹಾಯವಾಣಿ ದೂರವಾಣಿ ಸೇವಾ ಕೇಂದ್ರವನ್ನು ಕಲಬುರಗಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ ಎಂದು ಕಲಬುರಗಿ (ಸಿ.ಇ.ಟಿ.) ಸರ್ಕಾರಿ ಶಿಕ್ಷಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಸಹ ನಿರ್ದೇಶಕರು ತಿಳಿಸಿದ್ದಾರೆ.
ಟೋಲ್ ಫ್ರೀ ದೂರವಾಣಿ ಸೇವೆಯನ್ನು ಈಗಾಗಲೇ ಫೆಬ್ರವರಿ 20 ರಿಂದ ಪ್ರಾರಂಭಿಸಲಾಗಿದ್ದು, ಟೋಲ್-ಫ್ರೀ ದೂರವಾಣಿ ಸಂಖ್ಯೆ 18004250255 ಇದ್ದು, ಮಾರ್ಚ್/ಎಪ್ರಿಲ್ 2023 ರ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಹಾಜರಾಗಲಿರುವ ವಿದ್ಯಾರ್ಥಿಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಈ ದೂರವಾಣಿಯು ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಬೆಳಿಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಹಾಗೂ ರವಿವಾರ ಮಾತ್ರ ಕೇವಲ ಬೆಳಿಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ಲಭ್ಯವಿರುತ್ತದೆ.
ಎಸ್.ಎಸ್.ಎಲ್.ಸಿ.ಪರೀಕ್ಷೆಗೆ ಹಾಜರಾಗುತ್ತಿರುವ “ಕನ್ನಡ ಮಾಧ್ಯಮ” ವಿದ್ಯಾರ್ಥಿಗಳು ಪರೀಕ್ಷಾ ವಿಷಯಗಳಾದ ಕನ್ನಡ ಪ್ರಥಮ ಭಾಷೆ, ಇಂಗ್ಲೀಷ ದ್ವಿತೀಯ ಭಾಷೆ, ಹಿಂದಿ ತೃತೀಯ ಭಾಷೆ, ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆÉ ಉಚಿತವಾಗಿ ಕರೆಮಾಡಿ ನುರಿತ ಅನುಭವಿ ವಿಷಯ ಪರಿಣಿತರಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.