
ಕಲಬುರಗಿ,ಮೇ.12:2022-23ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕಾಳಗನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇಕಡಾ ನೂರರಷ್ಟು ಫಲಿತಾಂಶ ಬಂದಿದ್ದು, ಈ ಶಾಲೆಯ ವಿದ್ಯಾರ್ಥಿಯಾದ ಕುಮಾರ ವಿದ್ಯಾಧರ ತಂದೆ ರವೀಂದ್ರ ಇವರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 620 (ಶೇ. 99.20) ಅಂಕಗಳನ್ನು ಪಡೆಯುವುದರ ಮೂಲಕ ವಸತಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಕಾಳಗನೂರ ವಸತಿ ಶಾಲೆಯ ಪ್ರಾಂಶುಪಾಲರಾದ ಸುರೇಶ ಆಲ್ದಾರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಶಾಲೆಯ ವಿದ್ಯಾರ್ಥಿಗಳಾದ ಗಂಡಮ್ಮ ತಂದೆ ನಾಗೇಂದ್ರ 614 (ಶೇ. 98.56), ತುಕ್ಕಪ್ಪ ತಂದೆ ಭೀಮಶಾ 612 (ಶೇ. 97.92), ಅಂಬೋಜಿ ತಂದೆ ಮೋನೇಶ 607 (ಶೇ. 97.12), ಅನುರಾಧ ತಂದೆ ಮಲ್ಲಿಕಾರ್ಜುನ 607 (ಶೇ. 97.12), ಕರಣಕುಮಾರ ತಂದೆ ವಿನೋದ ಕುಮಾರ 607 (ಶೇ. 97.12), ವೀಣಾ ತಂದೆ ಜಯರಾಮ 603 (ಶೇ. 96.48), ಶಿವಕುಮಾರ ತಂದೆ ಬಾಬುರಾವ ಕಲಬಂಡಿ 600 (ಶೇ. 96) ಅಂಕ ಪಡೆದಿದ್ದಾರೆ.
ಈ ಶಾಲೆಯ ಒಟ್ಟು 44 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿ 36 ವಿದ್ಯಾರ್ಥಿಗಳು ಹಾಗೂ ಪ್ರಥಮ ದರ್ಜೆಯಲ್ಲಿ 08 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಈ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಾಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪಿ.ಶುಭ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.