
ಹನೂರು: ಮೇ.18:- ಹನೂರಿನ ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ 2023ರ ಎಸ್.ಎಸ್.ಎಲ್.ಸಿ ವಾರ್ಷಿಕ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆಂಗ್ಲ ಮಾಧ್ಯಮದಲ್ಲಿ ಪ್ರಿಯ ಆರ್ 610 ಅಂಕಗಳು, ಬಷಿರಾ 605 ಅಂಕಗಳು, ಆರ್ಯ ಜಿ. 601 ಅಂಕಗಳು, ದಿಗಂತ್ 601 ಅಂಕಗಳು, ರಿಯಾ ಎಸ್.ಎಲ್ 601 ಅಂಕಗಳು. ಹಾಗೂ ಕನ್ನಡ ಮಾಧ್ಯಮದಲ್ಲಿ ಇಶಾಂತ್ 594 ಅಂಕಗಳು, ಕಲ್ಪನಾ 592 ಅಂಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕಲ್ಪನಾ ರವರು ಈ ವಿದ್ಯಾಸಂಸ್ಥೆಯಲ್ಲಿ 1 ನೇ ತರಗತಿಯಿಂದ 10 ತರಗತಿಯ ವರೆಗೆ ವ್ಯಾಸಂಗ ಮಾಡಿದ್ದೇನೆ.
ಸಂಸ್ಥೆಯಲ್ಲಿ ಪಡೆದ ಜ್ಞಾನ ಹಾಗೂ ಶಿಸ್ತು ನಮ್ಮ ಮುಂದಿನ ಜೀವನಕ್ಕೆ ನೆರವಾಗಲಿದೆ.
ನಾನು ಪಡೆದಿರುವ. ಫಲಿತಾಂಶವು ನನಗೆ ಖುಷಿ ತಂದಿದೆ. ಪ್ರಾಮಾಣಿಕತೆ ಹಾಗೂ ನೈತಿಕತೆಯಿಂದ ಪರೀಕ್ಷೆಯನ್ನು ಎದುರಿಸಿದ್ದೇನೆ. ನಮ್ಮ ಸಂಸ್ಥೆಯು ನಮಗೆ ಮಾನವೀಯ ಮೌಲ್ಯಗಳ ಜೊತೆಗೆ ಸ್ಪರ್ಧಾತ್ಮಕ ಜಗತ್ತಿಗೆ ಜವಾಬ್ದಾರಿಯುತ ಹಾಗೂ ಯೋಗ್ಯ ಪ್ರಜೆಗಳನ್ನು ನಿರ್ಮಿಸುವುದರಲ್ಲಿ ಮಹತ್ತರ ಹೆಜ್ಜೆ ಇಡುತ್ತಿದೆ. ನಾವು ಈ ಸಂಸ್ಥೆಯ ವಿದ್ಯಾರ್ಥಿಗಳೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. ನಮ್ಮ ಸಾಧನೆಗೆ ಸಹಕರಿಸಿ, ಪೆÇ್ರೀತ್ಸಾಹಿಸಿದ ಸಂಸ್ಥೆಯ ಸಂಚಾಲಕರಾದ ಫಾದರ್ ರೋಷನ್ ರವರಿಗೂ, ಮುಖ್ಯೋಪಾಧ್ಯಾಯರಾದ ರಾಬರ್ಟ್ ಕ್ಲಮೆಂಟ್ ಧನರಾಜ್ ಎಸ್ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೂ ಅನಂತ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.