
ವಿಜಯಪುರ: ಮೇ.12: ವಿಜಯಪುರ ಸರಕಾರಿ ಬಾಲಕಿಯರ ಬಾಲಮಂದಿರದ ಪಾಲನೆ ಪೋಷಣೆ ಮತ್ತು ರಕ್ಷಣೆಯಲ್ಲಿರುವ ಬಾಲಕಿ ಕು.ಕಾಂಚನಾ ಶಿವಪ್ಪ ಕೋಳಿ ಹಾಗೂ ಸರಕಾರಿ ಬಾಲಕರ ಬಾಲಮಂದಿರದ ಮನೋಜ ಶಿವಲಾಲ ಜಾಧವ ಇವರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ಬಾಲಮಂದಿರಕ್ಕೆ ಕೀರ್ತಿ ತಂದಿದ್ದಾರೆ ಎಂದು ಬಾಲಮಂದಿರದ ಅಧೀಕ್ಷಕರು ತಿಳಿಸಿದ್ದಾರೆ.
ಕುಮಾರಿ ಕಾಂಚನಾ 2018ರಿಂದ ಇಲ್ಲಿಯವರೆಗೆ ಬಾಲಮಂದಿರದಲ್ಲಿ ಪುನರವಸತಿ ಪಡೆಯುತ್ತಿದ್ದು, ಸರ್ಕಾರಿ ಪ್ರೌಢಾಲೆ ನಂ.26 ಜಲನಗರ ವಿಜಯಪುರ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಉತ್ತಮ ಆದರ್ಶ ವಿದ್ಯಾರ್ಥಿನಿ ಪ್ರಶಸ್ತಿಯನ್ನೂ ಸಹ ಪಡೆದಿರುತ್ತಾಳೆ. ಈ ವರ್ಷ ಪ್ರಕಟವಾದ ಫಲಿತಾಂಶದಲ್ಲಿ 625ಕ್ಕೆ 535 ಅಂಕಗಳನ್ನು ಪಡೆದಯುವುದರ ಮೂಲಕ ಶೇ.85ರಷ್ಟು ಅಂಕ ಪಡೆದು ಉತ್ತಮ ಸಾಧನೆಗೈದಿದ್ದು, ಬಾಲಮಂದಿರದ ಅಧೀಕ್ಷಕರಾದ ಶ್ರೀಮತಿ ಎಸ್.ಡಿ.ಕರಿಗಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಸಾವಿತ್ರಿ ಗುಗ್ಗರಿ ಸೇರಿದಂತೆ ಬಾಲಮಂದಿರದ ಸಿಬ್ಬಂದಿಗಳು ಬಾಲಕಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅದರಂತೆ ಜಲನಗರ ಸರಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಸರ್ಕಾರಿ ಬಾಲಮಂದಿರದ ಕುಮಾರ ಮನೋಜ ಶಿವಲಾಲ ಜಾಧವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 567 ಅಂಕ ಪಡೆಯವುದರ ಮೂಲಕ ಶೇ.90.72 ರಷ್ಟು ಅಂಕ ಪಡೆದು ಉತ್ತಮ ಸಾಧನೆಗೈದಿರುವುದರಿಂದ ಬಾಲಕರ ಬಾಲಮಂದಿರದ ಅಧೀಕ್ಷಕರಾದ ಶ್ರೀಮತಿ ವೀಣಾದೇವಿ ಮಾನೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಸಾವಿತ್ರಿ ಗುಗ್ಗರಿ ಸೇರಿದಂತೆ ಬಾಲಮಂದಿರದ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.