ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳ ಪರಿಶೀಲನೆ

ಬಾಗಲಕೋಟೆ,ಮಾ28: ಮಾರ್ಚ28 :ಜಿಲ್ಲೆಯಲ್ಲಿ ನಡೆಯುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ ಸಿಇಓ ಶಶಿಧರ ಕುರೇರ ಬುಧವಾರ ಭೇಟಿ ನೀಡಿ ಪರೀಕ್ಷೆ ಸುಸೂತ್ರವಾಗಿ ನಡೆದ ಬಗ್ಗೆ ಪರಿಶೀಲನೆ ನಡೆಸಿದರು. ನಗರದಅಂಜುಮನ್ ಬಾಲಕರಉರ್ದು ಪ್ರೌಢಶಾಲೆ ಹಾಗೂ ಸಮೃದ್ದಿ ಗುರುಕುಲ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬುಧವಾರ ನಡೆದ ಸಮಾಜ ವಿಜ್ಞಾನ ವಿಷಯ ಪರೀಕ್ಷೆಯಲ್ಲಿಜಿಲ್ಲೆಯಲ್ಲಿ ನೊಂದಣಿಯಾದ ಒಟ್ಟು 31229 ವಿದ್ಯಾರ್ಥಿಗಳ ಪೈಕಿ 30981 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 248 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಬಾದಾಮಿತಾಲೂಕಿನಲ್ಲಿ ಪರೀಕ್ಷೆಗೆ ನೊಂದಣಿಯಾದ 5327 ಪೈಕಿ 5292 ವಿದ್ಯಾರ್ಥಿಗಳು ಹಾಜರಾಗಿ 35 ಜನಗೈರು ಹಾಜರಾಗಿದ್ದಾರೆ. ಬಾಗಲಕೋಟೆತಾಲೂಕಿನಲ್ಲಿ ನೊಂದಾಯಿಸಿದ 4668 ಪೈಕಿ 4634 ಜನ ಹಾಜರಿದ್ದು, 34 ಜನಗೈರು ಹಾಜರಾಗಿದ್ದಾರೆ.
ಬೀಳಗಿ ತಾಲೂಕಿನಲ್ಲಿ ನೊಂದಣಿಯಾದ 2840 ವಿದ್ಯಾರ್ಥಿಗಳ ಪೈಕಿ 2816 ಜನ ಹಾಜರಾಗಿ 24 ಜನಗೈರು ಹಾಜರಾಗಿದ್ದಾರೆ. ಹುನಗುಂದತಾಲೂಕಿನಲ್ಲಿ 5142 ಪೈಕಿ 5103 ಜನ ಹಾಜರಾಗಿ 39 ಜನಗೈರು ಹಾಜರಾಗಿದ್ದಾರೆ. ಜಮಖಂಡಿತಾಲೂಕಿನಲ್ಲಿ 8082 ಪೈಕಿ 8014 ಜನಗೈರು ಹಾಜರಾಗಿ 68 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮುಧೋಳ ತಾಲೂಕಿನಲ್ಲಿ 5170 ವಿದ್ಯಾರ್ಥಿಗಳ ಪೈಕಿ 5122 ಹಾಜರಾಗಿ 68 ಜನಗೈರು ಹಾಜರಾಗಿರುತ್ತಾರೆ. ಈ ಪರೀಕ್ಷೆಯಲ್ಲಿಯಾವುದೇ ವಿದ್ಯಾರ್ಥಿಡಿಬಾರ್‍ಆಗಿರುವದಿಲ್ಲವೆಂದು ಶಾಲಾ ಶಿಕ್ಷಣ ಇಲಾಖೆಯಉಪನಿರ್ದೇಶಕ ಬಿ.ಕೆ.ನಂದನೂರ ತಿಳಿಸಿದ್ದಾರೆ.