ಎಸ್.ಎಸ್.ಎಲ್.ಸಿ.ಪರಿಕ್ಷೆಯಲ್ಲಿ ಉತ್ತಮ ಸಾಧನೆ

ತಾಳಿಕೊಟೆ:ಮೇ.12: ಪಟ್ಟಣದ ಎಸ್.ಎಸ್.ವಿಧ್ಯಾಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ. ಪರಿಕ್ಷಾ ಫಲಿತಾಂಶವು ಶೇ.92.85ರಷ್ಟಾಗಿದೆ. ಪರಿಕ್ಷೆಗೆ ಕುಳಿತ 70 ವಿದ್ಯಾರ್ಥಿಗಳಲ್ಲಿ 22 ವಿಧ್ಯಾರ್ಥಿಗಳು ಶೇ.90 ಕ್ಕಿಂತ ಹೆಚ್ಚು ಅಂಕ ಪಡೆಯುವದರೊಂದಿಗೆ ಉತ್ತಮ ಶ್ರೇಣಿಯಲ್ಲಿಯಲ್ಲಿ ಪಾಸಾಗಿದ್ದಾರೆ. 40 ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿ, 3 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಸಂತೋಷ ಪಂಪಣ್ಣ 591(ಶೇ.94.56) ಅಂಕ ಪಡೆದು ಪ್ರಥಮ, ಸೋಮನಾಥ ಹೊಸಮನಿ 569(ಶೇ.91.04) ದ್ವಿತೀಯ, ನಿಂಗಪ್ಪ ಟೊಣ್ಣೂರ 567(ಶೇ.90.72) ಅಂಕ ಪಡೆದು ತೇತೀಯ ಸ್ಥಾನ ಪಡೆದು ಶಾಲೆಗೆ ಕಿರ್ತಿ ತಂದಿದ್ದಾರೆ.

ಸದರಿ ವಿಧ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ, ಕಾರ್ಯದರ್ಶಿ ಸಚೀನ ಪಾಟೀಲ, ಮುಖ್ಯಗುರುಗಳಾದ ಅಶೋಕ ಕಟ್ಟಿ ಒಳಗೊಂಡು ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.