ಎಸ್.ಎಸ್.ಎಲ್.ಸಿ.ಪರಿಕ್ಷೆಯಲ್ಲಿ ಉತ್ತಮ ಸಾಧನೆ

ತಾಳಿಕೊಟೆ:ಮೇ.12: ಪಟ್ಟಣದ ವಿಕಾಸ್ ಎಜ್ಯೂಕೇಶನಲ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ವಿಕಾಸ್ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯ ಎಸ್.ಎಸ್.ಎಲ್.ಸಿ. ಪರಿಕ್ಷಾ ಫಲಿತಾಂಶವು ಶೇ.100 ರಷ್ಟಾಗಿದೆ.

ಪರಿಕ್ಷೆಗೆ ಹಾಜರಾದ 23 ವಿದ್ಯಾರ್ಥಿಗಳಲ್ಲಿ 17 ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್, 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಿವನಗೌಡ ಬಿರಾದಾರ 597(ಶೇ.95.62) ಪ್ರಥಮ, ಕುಮಾರಿ ವರ್ಷಿಣಿ ಘಾಟಗೆ 589(ಶೇ.94.24) ದ್ವಿತೀಯ, ಕುಮಾರಿ ಶ್ರೇಯಾ ಗೊಬ್ಬುರ 588(ಶೇ.94.08) ಹಾಗೂ ಅಖಿಲಾ ಭಾಗವತ್ 588(ಶೇ.94.08) ತೃತೀಯ ಸ್ಥಾನ ಪಡೆದು ಶಾಲೆಗೆ ಕಿರ್ತೀ ತಂದಿದ್ದಾರೆ.

ಸಮಾಜ ವಿಜ್ಞಾನದಲ್ಲಿ 3, ಇಂಗ್ಲೀಷ 2, ಗಣಿತ 2, ಹಿಂದಿ 1 ವಿಷಯದಲ್ಲಿ ವಿಧ್ಯಾರ್ಥಿಗಳು 100ಕ್ಕೆ 100 ಅಂಕಪಡೆದುಕೊಂಡಿದ್ದಾರೆ.

ಸಾಧನೆ ಮಾಡಿದ ಎಲ್ಲ ವಿಧ್ಯಾರ್ಥಿಗಳಿಗೆ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ.ವ್ಹಿ.ಎಸ್.ಕಾರ್ಚಿ, ಅಧ್ಯಕ್ಷರಾದ ಆರ್.ಎಚ್.ಬಾಗೇವಾಡಿ, ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.