ಎಸ್.ಎಸ್.ಎಲ್.ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅವಧಿ ವಿಸ್ತರಣೆ:ಜೂ. 14ರ ವರೆಗೆ ಬಸ್ ಪ್ರಯಾಣಕ್ಕೆ ಅವಕಾಶ

ಕಲಬುರಗಿ:ಮೇ.17: ಪ್ರಸಕ್ತ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ವಿಶೇಷ ತರಗತಿ ಹಾಗೂ ಪೂರಕ ಪರೀಕ್ಷೆ-1ಕ್ಕೆ ಹಾಜರಾಗಲು ಅನುಕೂಲವಾಗುವಂತೆ ಈಗಾಗಲೆ 2023-24ನೇ ಸಾಲಿಗೆ ಪಡೆದಿರುವ ಬಸ್ ಪಾಸ್ ಜೊತೆಗೆ ಶಾಲಾ‌ ಮುಖ್ಯೋಪಾಧ್ಯಾಯರಿಂದ ಅನುತ್ತೀರ್ಣ ದೃಡೀಕರಣ ಪಟ್ಟಿ ಪತ್ರ ತೋರಿಸಿ ಕೆ.ಕೆ.ಆರ್.ಟಿ.ಸಿ. ಸಂಸ್ಥೆಯ ಬಸ್ ಗಳಲ್ಲಿ ಪ್ರಯಾಣ ಮಾಡಲು ಅವಕಾಶ ನೀಡಿದೆ ಎಂದು ಸಂಸ್ಥೆಯ ಎಂ.ಡಿ. ಎಂ.ರಾಚಪ್ಪ ತಿಳಿಸಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕೋರಿಗೆ ಮೇರೆಗೆ ಪೂರಕ ಪರೀಕ್ಷೆ-1 ಮತ್ತು ವಿಶೇಷ ತರಗತಿಗೆ ಹಾಜರಾಗಲು ಅನುಕೂಲವಾಗುವಂತೆ ಜೂನ್ 14ರ ವರೆಗೆ ಇಂತಹ ಅನುತ್ತೀರ್ಣ ಅಭ್ಯರ್ಥಿಗಳ ಪಾಸ್ ಅವಧಿ ವಿಸ್ತರಿಸಿದ್ದು, ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕೆಂದು ಅವರು ಕೋರಿದ್ದಾರೆ.