ಎಸ್.ಎಸ್.ಎಲ್.ಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನ

ಕಲಬುರಗಿ: ಜು.23:ನಗರದ ಕನ್ನಡ ಭವನದಲ್ಲಿ ಜಿಲ್ಲಾ ಪ್ರೌಢಶಾಲಾ ಮುಖ್ಯಪಾದ್ಯರ ಸಂಘದ ವತಿಯಿಂದ ಜಿಲ್ಲೆಯ ನಿವೃತ್ತ ಮುಖ್ಯೋಪಾಧ್ಯಾಯರಿಗೆ, 100% ಫಲಿತಾಂಶ ಪಡೆದ ಶಾಲೆಯ ಮುಖ್ಯ ಉಪಾಧ್ಯಾಯರಿಗೆ, ಹಾಗೂ ಎಸ್.ಎಸ್.ಎಲ್.ಸಿಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಶಶಿಲ ನಮೋಶಿ ಅವರು ಕಾರ್ಯಕ್ರಮನ ಉದ್ಘಾಟಿಸಿ ಮಾತನಾಡಿ ಈ ವರ್ಷ ನಮ್ಮ ಜಿಲ್ಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ ರಾಜ್ಯದ ಜಿಲ್ಲೆಗಳ ಅನುಕ್ರಮ ಹತ್ತರ ಒಳಗೆ ಬರುವಂತೆ ಮಾಡಿ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಿಗೆ ಆಗಮಿಸಿದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡುತ್ತಾ ಸಂಘದ ಜೊತೆಗಿದ್ದು ನಿವೇಶನವನ್ನು ಮರಳಿ ಕೊಡಿಸುವುದಾಗಿ ಬರವಸೆ ನಿಡಿದರು .

ಜಿಲ್ಲಾ ಉಪ ನಿರ್ದೇಶಕರಾದ ಸಕ್ರಪ್ಪ ಗೌಡ ಬಿರಾದರ್ ಮಾತನಾಡಿ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು ಇದನ್ನು ನಾವು ಪುಣ್ಯ ಮಾಡಿ ಪಡೆದಿದ್ದೇವೆ ವೃತ್ತಿಯಲ್ಲಿ ಸಾರ್ಥಕತೆ ಪಡೆಯಿರಿ ಈ ದೇಶಕ್ಕೆ ವಿದ್ಯಾರ್ಥಿಗಳನ್ನು ಸುಸಂಸ್ಕøತ ನಾಗರಿಕರನ್ನಾಗಿ ಸಜ್ಜುಗೊಳಿಸುವ ಜವಾಬ್ದಾರಿ ನಿಮ್ಮದಾಗಿದೆ ಅಲ್ಲದೆ ಹತ್ತನೇ ತರಗತಿಯ ಫಲಿತಾಂಶವನ್ನು ಉತ್ತಮಪಡಿಸಿ ಕೊಳ್ಳಲು ಹೆಚ್ಚು ಪರಿಶ್ರಮ ವಹಿಸಿ ಎಂದು ತಿಳಿಸಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್ ಹೂಗಾರ್, ಜಿಲ್ಲಾ ಸರ್ಕಾರ ನೌಕರರ ಸಂಘದ ಅಧ್ಯಕ್ಷ ರಾಜು ಲೆಂಗಟಿ ಮಾತನಾಡಿದರು. ಜಿಲ್ಲಾ ಪ್ರೌಢಶಾಲಾ ಸಂಘ ಅಧ್ಯಕ್ಷ ಮರೆಪ್ಪ ಬಸವಪಟ್ಟಣ ಇವರು ಸಭೆಯ ಅಧ್ಯಕ್ಷತೆ ವಹಿಸಿ ವಾಸ್ತವಿಕ ವಾಗಿ ಸಂಘದ ಬೆಳವಣಿಗೆಯ ಕುರಿತು ಸುದೀರ್ಘವಾಗಿ ಮಾತನಾಡಿದರು.

ಶಾಸಕರುಗಳಿಗೆ ಸಂಘದ ವತಿಯಿಂದ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾ ಕಾರ್ಯದರ್ಶಿಗಳಾದ ಮಹೇಶ್ ಹಿರೇಮಠ ಸ್ವಾಗತಿಸಿದರು, ಅಫಜಲಪೂರ ತಾಲೂಕ ಅಧ್ಯಕ್ಷ ರಾಜಶೇಖರ್ ತಲಾರಿ ನಿರೂಪಿಸಿದರು. ಎಸ್ ಬೀದಿ ರವರು ವಂದಿಸಿದರು. ರಾಜೇಂದ್ರ ರಾಥೋಡ್ ಪ್ರಾರ್ಥಿಸಿದರು.

ಈ ಕಾರ್ಯಕ್ರಮದಲ್ಲಿ ಚಿಂಚೋಳಿ ತಾಲೂಕಿನ ಅಕ್ಷರ ದಾಸೋಹದ ಸಹ ನಿರ್ದೇಶಕ ಜಯಪ್ಪ ಚಾಪೆಲ್, ಉಪಾಧ್ಯಕ್ಷೆ ಹೇಮಲತಾ ಪತ್ತಾರ್ , ದಿನಕರ ಮೂಲಗೆ, ಗುರುಮೂರ್ತಿ, ಅಶೋಕ ಜೋಶಿ, ಚಂದ್ರಮ ಅಮನಗಡ, ಅಶೋಕ ರೆಡ್ಡಿ, ರಾಜು ಹಂಚಾಟೆ, ಚಂದ್ರಶೇಖರ್ ಕಲ್ ಶೆಟ್ಟಿ, ರಘುಪತಿ ರೆಡ್ಡಿ, ಶಿವಾನಂದ ಗುಡ್ಡಡಗಿ, ಬಸವರಾಜ ನಿಮಬರಗಿ, ಅನುಪಮಾ, ಶರಣು ನಾಟಿಕಾರ, ಸತೀಶ ಜಮಗೋಂಡ, ಸೋಮು ಇಂಡಿ ಇದ್ದರು.