ಎಸ್ ಎಸ್ ಎಲ್ ಕಾನೂನು ಕಾಲೇಜನಲ್ಲಿ ಧ್ವಜಾರೋಹಣ

ಕಲಬುರಗಿ: ಆ.15:ಇಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶೇಠ ಶಂಕರಲಾಲ ಲಾಹೋಟಿ ಕಾನೂನು ಮಹಾವಿದ್ಯಾಲಯ, ಕಲಬುರಗಿಯಲ್ಲಿ ಬೆಳಿಗ್ಗೆ 07:00 ಗಂಟೆಗೆ “77ನೇ ಸ್ವಾತಂತ್ರ್ಯ ದಿನೋತ್ಸವ” ಆಚರಿಸಲಾಯಿತು.

ರಾಷ್ಟ್ರ ಧ್ವಜಾರೋಹಣವು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ. ವಿನಯ. ಎಸ್. ಪಾಟೀಲಜೀಯವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ರಾಷ್ಟ್ರ ಧ್ವಜಾರೋಹಣ ನೇರೆವೆರಿಸಿದರು. ಎಸ್.ಎಸ್.ಎಲ್.ಕಾನೂನು ಮಹಾವಿದ್ಯಾಲಯದ ಉಪ ಪ್ರಾಂಶುಪಾಲರು ಡಾ|| ಸವಿತಾ ಆರ. ಗೀರಿ ಅಧ್ಯಕ್ಷತೆವಹಿಸಿದರು.

ಈ ಸಂಧರ್ಭದಲ್ಲಿ ಅತಿಥಿಗಳಾಗಿ ಶ್ರೀ. ರಾಜಶೇಖರ ಪಾಟೀಲ್, ಶ್ರೀ. ನರೆಂದ್ರ ಬಡಶೇಶಿ, ಶ್ರೀ. ಶಂಕರ ಬುಳ್ಳಾ ಉಪಸ್ಥಿತರಿದರು. ಮಹಾವಿದ್ಯಾಲಯದ ಶ್ರೀ. ಕರುಣಾಕರ ಕಪೀಲದೇವ್, ಸರಸ್ವತಿ ಕಾಳಗಿ, ಬಸವರಾಜ ತೆಂಗಳಿ, ಸಂತೋಷ ಪಾಟೀಲ್, ಕರುಣಾ ಪಾಟೀಲ್, ಶಾಂತೇಶ್ವರಿ ಶಾಂತಗೀರಿ, ಮಹೇಶ್ವರಿ ಹಿರೇಮಠ, ರೇಣುಕಾ ದೇವರಮನಿ, ಜ್ಯೋತಿ ಕಾಡಾದಿ, ಜ್ಯೋತಿ ಹಂಗರ್ಕಿ, ಲಕ್ಷ್ಮೀ ಹುಡಗಿ, ರೇಷ್ಮಾ ಬಂಡಕ್, ದೇವಿಂದ್ರಪ್ಪ ಹಾಲಪಗೋಳ್, ಶಿವುಕುಮಾರ, ಮಲ್ಲಿನಾಥ ತಡಕಲ್, ಬಾಗಮ್ಮ, ಗುರುಬಾಯಿ, ಶಕುಂತಲಾಬಾಯಿ ಮತ್ತು ಬೋಧಕ & ಭೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.