ಎಸ್ ಎಸ್ ಎಂ ಜನ್ಮದಿನ; ೫೫೫೫ ಯೂನಿಟ್ ರಕ್ತ ಸಂಗ್ರಹ

ಹರಪನಹಳ್ಳಿ.ಸೆ.೧೯; ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ 55ನೇ ಜನ್ಮದಿನದ ಅಂಗವಾಗಿ ದಾನಿಗಳಿಂದ 5.555 ಯೂನಿಟ್ ರಕ್ತ ಸಂಗ್ರಹಿಸಿ ಬ್ಲಡ್ ಬ್ಯಾಂಕ್ ಮೂಲಕ ಬಡವರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ತಿಳಿಸಿದರು.ಹರಪನಹಳ್ಳಿ‌ ಪಟ್ಟಣದ ಪ್ರವಾಸಿಮಂದಿರ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ದಾವಣಗೆರೆ ಎಂಬಿಎ ಕಾಲೇಜ್ ಆವರಣದಲ್ಲಿ ಸೆ.22ರಂದು ಜನ್ಮ ದಿನಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಕ್ತದಾನ ಶಿಬಿರಗಳು ಅಲ್ಲಲ್ಲಿ ಆರಂಭಗೊAಡಿವೆ. ಎಂಬಿಎ ಕಾಲೇಜ್ ಆವರಣದಲ್ಲಿ ಜನ್ಮದಿನದಂದು ಸಮಾರಂಭ, ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಸಿನಿಮಾ ತಾರೆಯರು ಪಾಲ್ಗೊಳ್ಳಲಿದ್ದಾರೆ ಎಂದರು.ಎಸ್.ಎಸ್.ಮಲ್ಲಿಕಾರ್ಜುನ್ ಅವರು ಶಾಸಕ, ಸಚಿವರಾಗಿದ್ದಾಗ ದಾವಣಗೆರೆಯನ್ನು ಸ್ವಚ್ಚ ನಗರ ವನ್ನಾಗಿಸಲು ಶ್ರಮಿಸಿದ್ದಾರೆ. ಎಪಿಎಂಸಿ ವ್ಯವಸ್ಥೆ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಲೂರು ಅಂಜಪ್ಪ, ಎಲೆಬೆತೊರು ಕರಿಬಸಪ್ಪ, ಮುದೆಗೌಡ್ರ ಗಿರೀಶ್, ಹೊಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್, ಪ್ರೇಮಕುಮಾರ, ಮುಖಂಡರಾದ ಎಚ್.ಬಿ.ಪರಶುರಾಪ್ಪ, ಯಶವಂತಗೌಡ, ಮತ್ತಿಹಳ್ಳಿ ಅಜ್ಜಣ್ಣ, ಶಶಿಧರ ಪೂಜಾರ್, ಐಗೋಳ ಚಿದನಾಂದ, ಹೆಚ್.ಕೆ.ಹಾಲೇಶ್, ಹಾಲೇಶ್ ಗೌಡ, ಎಂ.ವಿ.ಅAಜಿನಪ್ಪ, ವೆಂಕಟೇಶ್ ವಕೀಲರು, ಹುಲಿಕಟ್ಟೆ ಚಂದ್ರಪ್ಪ, ಪುರಸಭೆ ಸದಸ್ಯ ಉದ್ದಾರ ಗಣೇಶ್,ನಿಚ್ವನಹಳ್ಳಿ ಆನಂದ್, ಪುಣಭಗಟ್ಟಿ ನಿಂಗಪ್ಪ ಓ.ರಾಮಪ್ಪ, ಮೂಸಾಸಾಬ್, ಪ್ರಕಾಶ್ ಪಾಟೀಲ್,ಜಿಷಾನ್ ಹ್ಯಾರೀಸ್, ಶ್ರೀಕಾಂತ್,.ಮಂಹತೇಶ್,ಕಮ್ಮತ್ತಹಳ್ಳಿ ತಿಪ್ಪಣ್ಣ, ಮಂಜುನಾಥ್, ಶಿವರಾಜ್, ಮತ್ತೂರು ಬಸವರಾಜ್, ಶಂಕ್ರಣ್ಣ, ಇತರರಿದ್ದರು.