ಎಸ್ ಎಸ್ ಎಂ ಜನ್ಮದಿನಕ್ಕೆ ಅಭಿನಂದನೆಗಳ ಮಹಾಪೂರ

ದಾವಣಗೆರೆ. ಸೆ.೨೩; ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ 54ನೇ ಜನ್ಮದಿನದ ಹಿನ್ನೆಲೆಯಲ್ಲಿ ಸಾವಿರಾರು ಗಣ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕರ‍್ಯಕರ್ತರು, ಅಭಿಮಾನಿಗಳು, ಅಧಿಕಾರಿ ವರ್ಗದವರು ಶುಭಾಶಯಗಳನ್ನು ಕೋರಿದರು. ಶಿವಪಾರ್ವತಿ ನಿವಾಸಕ್ಕೆ ಆಗಮಿಸಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಶುಭ ಕೋರಿದರು. ದಾವಣಗೆರೆಗೆ ಆಗಮಿಸಿದ್ದ ಕೇದಾರ ಪಂಚಪೀಠದ ಜಗದ್ಗುರು ಶ್ರೀ ಭೀಮಾಶಂಕರ ಶಿವಾಚಾರ್ಯ ಮಹಾಸ್ವಾಮಿಗಳವರು ಮಲ್ಲಿಕಾರ್ಜುನ್ ಅವರ ಜನ್ಮದಿನಕ್ಕೆ ಶುಭಕೋರಿದರು. ಎಸ್.ಎಸ್.ಮಲ್ಲಿಕಾರ್ಜುನ್  ಪತ್ನಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ಪುತ್ರ ಎಸ್.ಎಂ.ಸಮರ್ಥ, ಸಂಬಂಧಿಗಳಾದ ಶ್ರೀಮತಿ ಗಿರಿಜಮ್ಮ ಪರಮೇಶ್ವರಪ್ಪ, ಶ್ರೀಮತಿ ಗಿರಿಜಾ ಉಮಾಪತಿ, ಜೆಜೆಎಂ ಕಾಲೇಜು ಪ್ರಾಂಶುಪಾಲ ಡಾ. ಎಸ್.ಬಿ.ಮುರುಗೇಶ್ ಸೇರಿದಂತೆ ಕುಟುಂಬದ ಸದಸ್ಯರುಗಳು, ಸಂಬAಧಿಕರು ಶುಭಾಶಯ ತಿಳಿಸಿದರು. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು ಆಗಮಿಸಿ ಶುಭಾಶಯ ತಿಳಿಸಿದರು. ಜೆಜೆಎಂ ವೈದ್ಯಕೀಯ ಕಾಲೇಜು ಮತ್ತು ಎಸ್.ಎಸ್.ವೈದ್ಯಕೀಯ ಕಾಲೇಜುಗಳ ವತಿಯಿಂದ ರಕ್ತದಾನ ಶಿಬಿರ, ಕೋವಿಡ್-19 ಉಚಿತ ಲಸಿಕಾ ಶಿಬಿರ ಸೇರಿದಂತೆ ವಿವಿಧ ಸಾಮಾಜಿಕ ಸೇವಾ ಕಾರ‍್ಯಗಳು ನಡೆದರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಘಟಕದಿಂದ ತುರ್ಚಘಟ್ಟದ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರಿಗೆ ಹೋಳಿಗೆ ಊಟ ನೀಡಿ ಕೇಂದ್ರಕ್ಕೆ ವಿವಿಧ ವಸ್ತುಗಳನ್ನು ಮಲ್ಲಿಕಾರ್ಜುನ್ ಅವರಿಂದಲೇ ವಿತರಿಸಲಾಯಿತು.ನಂತರ ಬೆಳವನೂರು ಗ್ರಾಮದಲ್ಲಿ ಏರ್ಪಡಿಸಿದ್ದ ಜನ್ಮದಿನದ ಕರ‍್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಅವರು ಭಾಗವಹಿಸಿದ್ದರು.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಘಟಕದಿಂದ ಹಾಗೂ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಪೌರಕಾರ್ಮಿಕರಿಗೆ ಸೀರೆ ಮತ್ತು ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಮಲ್ಲಿಕಾರ್ಜುನ್ ಅವರ ನಿವಾಸದ ಬಳಿಯೂ ಸಹ ಅವರ ಅಭಿಮಾನಿಗಳು ಏರ್ಪಡಿಸಿದ್ದ ಅನ್ನಸಂತರ್ಪಣೆಗೆ ಮಲ್ಲಿಕಾರ್ಜುನ್ ಅವರೇ ಚಾಲನೆ ನೀಡಿದರು.ನಗರದ ರಾಜೇಂದ್ರ ಬಡಾವಣೆಯ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಕುಂಕುಮ ಅರ್ಚನೆ ನಡೆಸಿದ ಸೇವಾದಳದವರು ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೇಜರ್ ಹಂಚಿ ಸಸಿ ನೆಡುವ ಮೂಲಕ ಆಚರಣೆ ಮಾಡಿದರು.ಅಸಂಘಟಿತ ಕಾರ್ಮಿಕರಿಂದ ವೃದ್ದಾಶ್ರಮದವರಿಗೆ ಹಣ್ಣು-ಹಂಪಲು ಹಾಗೂ ಮಾಯಕೊಂಡ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಪೌಷ್ಠಿಕ ಆಹಾರವನ್ನು ವಿತರಿಸಲಾಯಿತು. ಬಸಾಪುರದಲ್ಲಿ ಕೆ.ಎಲ್. ಹರೀಶ್ ಕುಟುಂಬ ವರ್ಗದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.