ಎಸ್ ಎಲ್ ವಿ 25ನೇ ದಿನ ಪೂರ್ಣ

“ಎಸ್‍ಎಲ್‍ವಿ” ಚಿತ್ರದ ಮೂಲಕ ಯುವ ನಿರ್ದೇಶಕ ಸೌರಭ್ ಕುಲಕರ್ಣಿ ಭರವಸೆಯ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಚೊಚ್ಚಲ ಚಿತ್ರದಲ್ಲಿ ಯಶಸ್ವಿ ನಿರ್ದೇಶಕ ಎನ್ನುವ ಹಿರಿಮೆ ತನ್ನದಾಗಿಸಿಕೊಂಡಿದ್ದಾರೆ. ವಾರಕ್ಕೆ 8ರಿಂದ 10 ಸಿನಿಮಾಗಳು ಬಿಡುಗಡೆ ಆಗುವ ಸಮಯದಲ್ಲಿಯೂ ಎಸ್ ಎಲ್ ವಿ ಚಿತ್ರ 25 ದಿನ ಪೂರ್ಣಗೊಳಿಸಿದೆ. ಇದು ಇಡೀ ತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಚಿತ್ರ 25ದಿನ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ನಿರ್ದೇಶಕ ಸೌರಭ್ ಕಲಕರ್ಣಿ ಮಾಹಿತಿ ನೀಡಿ,  ಎರಡು ವಷರ್ಷದ ಶ್ರಮ ಸಾರ್ಥಕವಾಗಿದೆ. 25 ಮಂದಿ ನಿರ್ಮಾಪಕರನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಚಿತ್ರ 25 ದಿನ ಪೂರ್ಣಗೊಂಡಿದೆ. ಇದು ಖುಷಿಯ ಸಂಗತಿ. ಚಿತ್ರ ನೋಡಿದ ಪ್ರತಿಯೊಬ್ಬರೂ ಮೆಚ್ಚುಗೆ ಮಾತನಾಡಿದ್ದಾರೆ. ಇದು ಇನ್ನಷ್ಟು ಚಿತ್ರ ಮಾಡಲು ಪ್ರೇರೇಪಿಸಿದೆ ಎಂದರು.

ಚಿತ್ರದ ಸೆಟಲೈಟ್, ಒಟಿಟಿ ಮಾತುಕತೆ ಹಂತದಲ್ಲಿದೆ. ಮುಂದಿನ ತಿಂಗಳು ಅಂತಿಮವಾಗುವ ನಿರೀಕ್ಷೆ ಇದೆ. ಜೊತೆಗೆ ಇನ್ನೂ ಕೆಲಸ ನಿರ್ಮಾಪಕರು ಮುಂದೆ ಬಂದಿದ್ದಾರೆ ಅವರ ಜೊತೆ ಸಿನಿಮಾ ಮಾಡುವ ಮಾತುಕತೆ ನಡೆಯುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.

ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಅಂಜನ್ ಭಾರಧ್ವಜ್, ನಾಯಕಿ ದಿಶಾ ರಮೇಶ್, ಕಲಾವಿದರಾದ ರೋಹಿತ್ ನಾಗೇಶ್,ಚಿತ್ರಕ್ಕೆ ಪ್ರತಿ ಹಂತದಲ್ಲಿ ಸಹಕಾರ ನೀಡಿರುವ ಹಿರಿಯ ನಟ ಮಂಡ್ಯ ರಮೇಶ್ ಮತ್ತಿತರರು ಮಾಹಿತಿ ಹಂಚಿಕೊಂಡರು.