ಎಸ್ ಎಫ್ ಐ  ಸಂಘಟನೆಯಿಂದ ಸಾವಿತ್ರಿಬಾಯಿ ಪುಲೆ ಜಯಂತಿ ಆಚರಣೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜ.05 ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್ ಎಫ್ ಐ) ತಾಲೂಕು ಸಮಿತಿ ವತಿಯಿಂದ ಸಾವಿತ್ರಿಬಾಯಿ ಫುಲೆ ಜಯಂತಿಯನ್ನ ಪಟ್ಟಣದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ” ಅಕ್ಷರ ಜ್ಞಾನದ ಬೆಳಕು ಸಾವಿತ್ರಿಬಾಯಿ ಫುಲೆ ಎಂಬ ವಿಚಾರ ಸಂಕೀರ್ಣ ಮಾಡುವುದರ ಮುಖಾಂತರ  ಆಚರಿಸಲಾಯಿತು ,
ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ್ದ  ರಂಗನಾಥ್ ಹವಾಲ್ದಾರ್ ಮಾತನಾಡಿ ಈ ದಿನ ವಿದ್ಯಾರ್ಥಿನಿಯರಿಗೆ ಶಿಕ್ಷಣ ಪಡೆಯುತ್ತಿರುವುದು ಫಾತಿಮಾ ಮತ್ತು ಸಾವಿತ್ರಬಾಯಿ ಫುಲೆ ಎಂಥವರ ಹೋರಾಟದ ಫಲವಾಗಿದೆ ಸಮಾಜದಲ್ಲಿ ಹೆಣ್ಣಿಗೆ ಮತ್ತು ಗಂಡಿಗೆ ತಾರತಮ್ಯ ಮನೋಭಾವವನ್ನು ಮೊದಲು ನಾವು ಹೋಗಲಾಡಿಸಿಕೊಳ್ಳಬೇಕು , ಬಾಲ್ಯವಿವಾಹ ಪದ್ದತಿಯನ್ನು ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿಯು ನಡೆಯುತ್ತಿದೆ ಅದನ್ನು ಖಂಡಿಸಿ ಸೂಕ್ತ ಕಾನೂನಿನ ರಕ್ಷಣೆಯನ್ನು ಪಡೆಯಬೇಕು ಹಾಗೇ ಇಂತವರ ಜೀವನ ಶೈಲಿಗಳನ್ನು ಸಾಮಾಜಿಕ ಕಾರ್ಯಗಳನ್ನು ಮೆಲುಕು ಹಾಕುತ್ತ ವಿದ್ಯಾರ್ಥಿ ಪೀಳಿಗೆಯು ಅವರನ್ನು ಆದರ್ಶಗಳನ್ನು ಮೈಗೂಡಿಕೊಳ್ಳಬೇಕು ಎಂದರು., ಪ್ರಾಂತ ರೈತ ಸಂಘದ ಕೊಟಿಗಿ ಮಲ್ಲಿಕಾರ್ಜುನ ರವರು ಮಾತನಾಡಿ ಈ ದಿನ ಹಾಸ್ಟೆಲ್ ಶಾಲಾ ಕಾಲೇಜ್ ಗಳಲ್ಲಿ ಪಡೆಯುತ್ತಿರುವ ಎಲ್ಲಾ ಸೌಲಭ್ಯಗಳು ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಹೋರಟದ ಫಲವಾಗಿದೆ ಎಂದರು , ಕಮ್ಮಾರ್ ಬಸವರಾಜ್ ಮಾತನಾಡಿ ಪಸಕ್ತದಿನಗಳಲ್ಲಿ ಹೋರಾಟದ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಬೇಕಿದೆ ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು.
 ರೈತ ಮಹಿಳಾ ನಾಯಕಿ ಶಂಷದ್ ಬೇಗಂ, ಜನವಾದಿ ಮಹಿಳ ಸಂಘಟನೆಯ ವಿನೋದ, ಸರೋಜ  ವಕೀಲರಾದ ವಾಸಂತಿ ಸಾಲ್ಮನಿ ಮಾತನಾಡಿದರು  ,  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸ್ಟೆಲ್ ವಾರ್ಡನ್  ಜಯಮ್ಮ ಮತ್ತಿಹಳ್ಳಿ ವಹಿಸಿದ್ದರು
, ಎಸ್ ಎಫ್ ಐ ನಾ ರಾಜ್ಯ ಸಮಿತಿ ಸದಸ್ಯರಾದ ದೊಡ್ಡ ಬಸವರಾಜ್ ಪ್ರಸ್ತಾವಿಕ ನುಡಿದರು ಜಿಲ್ಲಾ ಸಮಿತಿ ಮುಖಂಡರಾದ ಜಯಸೂರ್ಯ  ನಿರೂಪಣೆ ಮಾಡಿದರು , ಅಂಗವಿಕಲ ಸಂಘಟನೆಯ ಹುಸ್ಮಾನ್ ಬಾಷ್  ಉಪಸ್ಥಿತಿ ಇದ್ದರು ವಿದ್ಯಾರ್ಥಿನಿಯರಾದ
ಪಲ್ಲವಿ ಮತ್ತು ಸುಪ್ರಿತ ಅವರು ಪ್ರಾರ್ಥನೆ ಗೀತೆಯನ್ನು ಹಾಡಿದರು.