ಎಸ್ ಎನ್ ಪೇಟೆ 2 ನೇ ಕ್ರಾಸ್ ಡಾಂಬರೀಕರಣ ಕಾಮಗಾರಿಗೆ ಚಾಲನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಸೆ 26 :  ನಗರದ 19 ನೇ ವಾರ್ಡಿನಲ್ಲಿ ಸತ್ಯನಾರಾಯಣ ಪೇಟೆ ಎರಡನೇ ಕ್ರಾಸ್ ನ ದುರಸ್ಥಿ  ಕಾಮಗಾರಿಗೆ ನಗರ ಶಾಸಕ ಸೋಮಶೇಖರ ರೆಡ್ಡಿ ನಿನ್ನೆ  ಭೂಮಿ ಪೂಜೆ ನೆರವೇರಿಸಿದರು. ‌
ಕಾಮಗಾರಿಯು ಡಾಂಬರ್ ರಸ್ತೆಯನ್ನು ಒಳಗೊಂಡಿದ್ದು ಅಂದಾಜು 9,37,000 ಸಾವಿರ  ರೂಪಾಯಿಗಳ ಮೊತ್ತದ ಕಾಮಗಾರಿ ಆಗಿದ್ದು, ಇದು ಶಾಸಕರ ಅನುದಾನದಡಿ 14 ಹಣಕಾಸು ಯೋಜನೆಯಡಿ  ಮಂಜೂರುಆಗಿದೆ.
ಈ  ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಾಲಣ್ಣ, ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಕೆ .ಎಸ್ ಅಶೋಕ್ ಕುಮಾರ್, ಡಾಕ್ಟರ್ ಅರುಣ್, ಸಿಮೆಂಟ್ ಗಿರಿ,
ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಬರಾಕೂ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ್ ರೆಡ್ಡಿ, ಬೂತ್ ಅಧ್ಯಕ್ಷರುಗಳು, ವಾರ್ಡ್ ಪ್ರಮುಖರು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು