
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,19- ನಗರದ ಸತ್ಯನಾರಾಯಣ ಪೇಟೆಯ ರೈಲ್ವೇ ಅಂಡರ್ ಪಾಸ್ ಆಗಷ್ಟ್ ಮೊದಲ ವಾರದಲ್ಲಿ ವಾಹನಗಳ ಓಡಾಟಕ್ಕೆ ಮುಕ್ತಗೊಳ್ಳಲಿದೆ ಎಂದು ನಗರ ಪಾಲಿಕೆ ಆಯುಕ್ತ ರುದ್ರೇಶ್ ತಿಳಿಸಿದ್ದಾರೆ.
ಈ ಸೇತುವೆ ನಿರ್ಮಿಸಿದಾಗಿನಿಂದಲೂ ಈ ಕೆಳಸೇತುವೆಯಲ್ಲಿ ಚರಂಡಿಯ ಸೀಪೇಜ್ ನೀರು ಹರಿಯುವುದು ನಿಂತಿರಲಿಲ್ಲ. ಅಲ್ಲದೆ ಮಳೆ ಬಂದರೆ ಸೇತುವೆಯಲ್ಲಿ ನಿಲ್ಲುತ್ತಿದ್ದ ನೀರು ಸಹ ಕೂಡಲೇ ಪಂಪ್ ಮಾಡುವ ವ್ಯವಸ್ಥೆಯೂ ಸಮರ್ಪಕವಾಗಿ ಇರಲಿಲ್ಲ ಇದರಿಂದಾಗಿ ಜನರು ಮತ್ತು ವಾಹನ ಸವಾರರು ಸಮಸ್ಯೆ ಎದಿರಿಸುತ್ತಿದ್ದರು.
ಇದನ್ನು ಸರಿಪಡಿಸುವಂತೆ ಅನೆರಕ ರೀತಿಯ ದೂರುಗಳು ಪಾಲಿಕೆಗೆ ಸಲ್ಲಿಸಿದರೂ, ನಗರವನ್ನಾಳಿದ ಜನಪ್ರತಿನಿದಿಗಳುಗೆ ಮನವಿ ಮಾಡಿದರೂ. ಈ ಚರಂಡಿ ನೀರು ಸೋರಿಕೆ ನಿಲ್ಲಿಸುವ ತಂತ್ರಗಾರಿಕೆಯ ಇಂಜಿನೀಯರ್ ಇರಲಿಲ್ಲವೆಂಬಂತೆ ಆಗಿತ್ತು.
ಆದರೆ ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ, ಸಾಮಾಜಿಕ ಹೋರಾಟಗಾರರ ಒತ್ತಡದಿಂದ ಪಾಲಿಕೆ ಆಯುಕ್ತ ರುದ್ರೇಶ್ ಅವರ ಆಸಕ್ತಿಯಿಂದ ಕೊನೆಗೂ ಈ ಸೇತುವೆಯಲ್ಲಿ ಹರಿಯುತ್ತಿದ್ದ ಚರಂಡಿ ನೀರಿಗೆ ಮುಕ್ತಿ ದೊರೆಯುವಂತ ಕಾಮಗಾರಿ ಕೈಗೊಂಡಿದೆ.
ಘಟರ್ ನಿರ್ಮಾಣ;
ಕೆಳಸೇತುವೆಯಲ್ಲಿ ಕೆಳಗಡೆ ಸಂಪೂರ್ಣವಾಗಿ ಕಾಂಕ್ರೀಟ್ ಹಾಕಲಾಗಿದೆ. ಜತೆಗೆ 6 ಘಟರ್ (ಮೋರಿ)ಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಎರಡು ಘಟರ್‍ಗಳ ಕಾಮಗಾರಿ ಪೂರ್ಣಗೊಂಡಿವೆ. ಇನ್ನು ನಾಲ್ಕು ಘಟರ್‍ಗಳನ್ನು ನಿರ್ಮಿಸಬೇಕಿದೆ. 6ರಲ್ಲಿ ಕನಿಷ್ಠ ನಾಲ್ಕು ಪೂರ್ಣಗೊಂಡರೂ, ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಮೇಲೆ ಕಬ್ಬಿಣದ ಜಾಲಿ ಹಾಕುವುದು ಸೇರಿ ಇತರೆ ಸಣ್ಣಪುಟ್ಟ ಕಾಮಗಾರಿಗಳನ್ನು ನಂತರ ಮಾಡಿಕೊಳ್ಳಬಹುದು. ಇನ್ನೊಂದು ವಾರದಲ್ಲಿ ನಾಲ್ಕು ಘಟರ್‍ಗಳ ಕಾಮಗಾರಿ ಮುಗಿಯಲಿವೆ.
ಕೆಳಸೇತುವೆಯಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗಲಿದೆ. ಈ ನೀರು ಹೆಚ್ಚು ಸಂಗ್ರಹವಾಗದಂತೆ ಕೂಡಲೇ ಬೇರೆಡೆಗೆ ಪಂಪ್ ಮಾಡಲಿದೆ ಅದಕ್ಕಾಗಿ ಈಗಾಗಲೇ ಎರಡು ಮೋಟರ್‍ಗಳಿವೆ. ಇವುಗಳೊಂದಿಗೆ 7.5 ಹೆಚ್‍ಪಿ ಸಾಮಥ್ರ್ಯದ ಮತ್ತೊಂದು ಮೋಟರ್ ಸಹ ಅಳವಡಿಸಲಿದೆಯಂತೆ. ಒಂದು ಡೀಜೆಲ್ ಜನರೇಟರ್ ಅಳವಡಿಸಲಾಗುವುದು. ಒಬ್ಬ ಸಿಬ್ಬಂದಿಯನ್ನೂ ಸಹ ನಿಯೋಜಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಕೈಗೊಂಡಿರು ಕಾಮಗಾರಿ ಮುಕ್ತಾಯದ ಅಂತ್ಯಕ್ಕೆ ಬಂದಿದೆ. ಆಗಷ್ಟ್ ಮೊದಲ ವಾರದಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತ ಮಾಡಲಿದೆ
ಎಂ.ಎನ್.ರುದ್ರೇಶ್
ಆಯುಕ್ತರು,
ಮಹಾನಗರ ಪಾಲಿಕೆ,ಬಳ್ಳಾರಿ