(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.20: ನಗರದ ಸತ್ಯನಾರಾಯಣ ಪೇಟೆಯ ರೈಲ್ವೇ ಅಂಡರ್ ಪಾಸ್ ದುರಸ್ಥಿ ಕಾಮಗಾರಿ ಪ್ರಗತಿಯಲ್ಲಿದೆ.
ಈ ಅಂಡರ್ ಪಾಸ್ ನಲ್ಲಿ ಸದಾ ಜಿನುಗುತ್ತಿದ್ದ ಚರಂಡಿ ನೀರು ಮತ್ತು ಸರಾಗವಾಗಿ ಹರಿದು ಹೋಗದೆ, ಜನ ಮತ್ತು ವಾಹನಗಳ ಸಂಚಾರಕ್ಕೆ ಆಗುತ್ತಿದ್ದ ಸಮಸ್ಯೆಯನ್ನು ಪರಿಹರಿಸಲು ಪಾಲಿಕೆ ಮುಂದಾಗಿದೆ.
ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ನಿವಾರಣೆಗೆ ಬುಡಾ ಮಾಜಿ ಅಧ್ಯಕ್ಷ ಎನ್.ಪ್ರತಾಪ್ ರೆಡ್ಡಿ ಮತ್ತಿತರ ಹೋರಾಟಗಾರರು ಪಾಲಿಕೆಗೆ ಒತ್ತಡ ತಂದು ದುರಸ್ಥಿ ಕೈಗೊಳ್ಳುವಂತೆ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಅಮನಡರ್ ಪಾಸ್ ನಲ್ಲಿ ವಾಹನ ಸಂಚಾರ ಬಮನದ್ ಮಾಡಿ ಅಂದಾಜು 50 ಲಕ್ಷ ರೂ ವೆಚ್ಚದಲಿ ಕಾಮಗಾರಿ ಕೈಗೊಂಡಿದೆ.
ಕಾಮಗಾರಿ ಪ್ರಗತಿಯಲ್ಲಿದ್ದು ಅಂಡರ್ ಪಾಸ್ ರಸ್ತೆಗೆ ಮತ್ತೊಮ್ಮೆ ಕಾಂಕ್ರೀಟ್ ಹಾಕಲಾಗುತ್ತಿದೆ. ಇನ್ನು 10 ರಿಂದ 12 ದಿನದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳವ ಸಾಧ್ಯತೆ ಇದೆ.