ಎಸ್ ಎನ್ ಪೇಟೆ ಅಂಡರ್ ಪಾಸ್ ಓಪನ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.10: ನಗರದ ಸತ್ಯನಾರಾಯಣ ಪೇಟೆಯ ಅಂಡರ್ ಪಾಸ್ ಬ್ರಿಡ್ಜ್ ಜನ, ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.
ಮಳೆ ಬಂದರೆ ನೀರು ನಿಲ್ಲುತ್ತಿದ್ದ, ನಿರಂತರವಾಗಿ ಸೀಪೇಜ್ ನೀರಿನಿಂದ ಸೋರಿಕೆಯಾಗಿ ಜನ,ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಈ ಬಗ್ಗೆ ಅನೇಕ ವರ್ಷಗಳಿಂದ ಜನ‌ಬೇಸತ್ತು ಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದರೂ ಸಮಸ್ಯೆ‌ ನಿವಾರಣೆಗೆ ಮುಂದಾಗಿರಲಿಲ್ಲ.
ಅನೇಕ‌ ಸಾಮಾಜಿಕ‌ ಕಾರ್ಯಕರ್ತರು, ಹೋರಾಟಗಾರರು ದುರಸ್ಥಿಗೆ ಪಾಲಿಕೆಗೆ ಅನೇಕ ಬಾರಿ ಮನವಿ ಮಾಡಿದ್ದರು. ಅಂತಿಮವಾಗಿ ಬುಡಾ ಮಾಜಿ ಅಧ್ಯಕ್ಷ ಎನ್. ಪ್ರತಾಪ್ ರೆಡ್ಡಿ ಅವರು ಪಟ್ಟು ಹಿಡಿದು ಪಾಲುಕೆಯಿಂದ ದುರಸ್ಥಿ ಕಾಮಗಾರಿಗೆ ಯೋಜನೆ ರೂಪಿಸಿ ಅನುಷ್ಟಾನಕ್ಕೆ ತಂದಿದ್ದಾರೆ.
ದುರಸ್ಥಿ ಕಾಮಗಾರಿಗಾಗಿ ಅಂಡರ್ ಪಾಸ್ ನಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು.
ಇನ್ನು ಒಂದಿಷ್ಟು ಸಣ್ಣ ರಿಪೇರಿ ನಡೆಯುತ್ತಿದೆ. ಆದರೂ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗಿದೆ.
ನಿನ್ನೆ ರಾತ್ರಿ ದೊಡ್ಡದಾಗಿ ಮಳೆ ಬಂದರೂ ಅಂಡರ್ ಪಾಸ್ ನಲ್ಲಿ ನೀರು ನಿಂತಿಲ್ಲ. ಸುಗಮವಾಗಿ ವಾಹನಗಳ ಸಂಚಾರ ನಡೆದಿರುವುದು ಸಾರ್ವಜನಿಕರಲ್ಲಿ ಸಂತಸ ತಂದಿದೆ.
ಇನ್ನೂ ಒಂದಿಷ್ಟು ಸಣ್ಣ ಪುಟ್ಟ ದುರಸ್ಥಿ ಕಾರ್ಯ ಇದೆ. ಆದರೆ ರಸ್ತೆ ಬಂದ್ ಮಾಡಿ ಬಹಳ ದಿನ ಆಗಿದ್ದರಿಂದ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿದೆ. ಪೂರ್ಣಕಾಮಗಾರಿ ಮಾಡಿ ಉದ್ಘಾಟನೆ ಕಾರ್ಯ ಮಾಡಲಿದೆ.
ಎನ್.ಪ್ರತಾಪ್ ರೆಡ್ಡಿ, ಮಾಜಿ ಅಧ್ಯಕ್ಷರು, ಬುಡಾ ಬಳ್ಳಾರಿ.