ಎಸ್ ಎಂ ಎಸ್ ಪಾಲಿಸದ ಬಿಜೆಪಿ

ಬಳ್ಳಾರಿ,ಏ- 03 : ಸರ್ಕಾರದ ನಿಯಮ ಜನ ಸಾಮನ್ಯರಿಗೆ ಒಂದು ‌ರಾಜಕೀಯದವರಿಗೆ ಇನ್ನೊಂದು ರೀತಿಯಲ್ಲಿ ಇರಲ್ಲ, ಆದರೆ ಕರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಿನ್ನೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನು ಇಲ್ಲಿನ ಬಿಜೆಪಿ ಗಾಳಿಗೆ ತೂರಿದೆ ಎನ್ನಬಹುದು.
ಇಂದು ನಗರದ ಹೊರವಲಯದ ಆರ್ ಕೆ ಎಸ್ ಎಸಿ ಪಂಕ್ಷನ್ ಹಾಲ್ ನಲ್ಲಿ ನಡೆದ ಯುವ ಮೋರ್ಚಾ ಸಭೆಯಲ್ಲಿ ಕೊರೊನಾ ರೂಲ್ಸ್ ನ್ನು ಪಾಲಿಸಿರಲಿಲ್ಲ.
ಕೇವಲ ಸಾಮಾನ್ಯ ಜನರಿಗೆ ಮತ್ತು ಸಿನಿಮಾ ಮಂದಿಗೆ ಮಾತ್ರನಾ ಈ ರೂಲ್ಸ್ ಎನ್ನವಂತಿದೆ. ಬಿಜೆಪಿ ಕಾರ್ಯಕ್ರಮ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಈ ಕೊರೋನಾ ರೂಲ್ಸ್ ಅನ್ವಯ ಆಗಲ್ವಾ ಅವರಿಗೆ ಕರೋನಾ ಬರೋದಿಲ್ವಾ ಎನ್ಬುವಂತಿತ್ತು. ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗಿಯಾಗಿದ್ದರು.
ವೇದಿಕೆ ಮೇಲೆ ಕುಳಿತವರು ಸೇರಿದಂತೆ ಬಹುತೇಕ ಜನರು ಮಾಸ್ಕ್ ಹಾಕಿಕೊಂಡಿರಲಿಲ್ಲ, ಮತ್ತು ಸಾಮಾಜಿಕ ಅಂತರದ ಮಾತಂತೂ ದೂರ ಉಳಿಯಿತು.
ಯುವಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್, ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ಅನೇಕರು‌ ಇದ್ದರು.