ಗುರುಮಠಕಲ್ :ಜೂ.22: ಗಡಿ ಭಾಗದಲ್ಲಿ ನಮ್ಮ ಕ್ಷೇತ್ರಗಳ ಜನತೆಯ ಅಭಿವೃದ್ಧಿಗೆ ಒತ್ತು ನೀಡಿ ಪರಸ್ಪರ ಸೌಹಾರ್ದಯುತವಾಗಿ ಇರಬೇಕಾದದ್ದು ನಮ್ಮ ಆಧ್ಯ ಕರ್ತವ್ಯವಾಗಿದೆ ಎಂದು ಗುರುಮಠಕಲ್‍ನ ನೂತನ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಅವರು ಪಕ್ಕದ ತೆಲಂಗಾಣದ ನಾರಾಯಣಪೇಟೆ ಕ್ಷೇತ್ರದ ಶಾಸಕ ಎಸ್.ಆರ್. ರೆಡ್ಡಿಯವರನ್ನು ನಾರಾಯಣಪೇಟೆಯ ಅವರ ನಿವಾಸದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಮಾತನಾಡುತ್ತಾ, ಆತ್ಮೀಯರು ನಮ್ಮ ಹಿತೈಷಿಗಳಾದ ನಾರಯಣಪೇಟದ ಶಾಸಕರಾದ ಎಸ್.ಆರ್.ರೆಡ್ಡಿಯವರು ಗುರುಮಠಕಲ್ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಪ್ರಚಾರ ಮಾಡಿ ಬೆಂಬಲ ಸೂಚಿಸಿ ಸಹಕರಿಸಿದ್ದರಿಂದ ಅವರಿಗೆ ಇಂದು ಆತ್ಮೀಯವಾಗಿ ಸನ್ಮಾನಿಸಲಾಗಿದೆ. ರೆಡ್ಡಿಯವರು ನಮ್ಮ ಮೇಲೆ ಕಾಳಜಿವಹಿಸಿ ಸಮಯ ಮಾಡಿಕೊಂಡು ಗುರುಮಠಕಲ್ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡಿದ್ದಾರೆ. ಜೆಡಿಎಸ್ ಪಂಚರತ್ನ ಯಾತ್ರೆ ಯರಗೋಳಕ್ಕೆ ಬಂದಾಗ ತಾವು ಆಗಮಿಸಿ ಪ್ರಚಾರ ಭಾಷಣ ಮಾಡಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದನ್ನು ಕಂದಕೂರ ಸ್ಮರಿಸಿದರು.
ಮುಂಬರುವ ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಸ್‍ಆರ್ ರೆಡ್ಡಿ ಪರವಾಗಿ ನಾವು ಪ್ರಚಾರ ಮಾಡಿ ಅವರಿಗೆ ಬೆಂಬಲ ಸೂಚಿಸಿ ಸಹಕರಿಸುವೆವು ಎಂದು ಕಂದಕೂರ ಹೇಳಿದರು. ಗುರುಮಠಕಲ್-ನಾರಾಯಣಪೆಟೆ ಎರಡೂ ಕ್ಷೇತ್ರಗಳು ಅವಳಿ ರಾಜ್ಯದ ಗಡಿಭಾಗದ ಕ್ಷೇತ್ರಗಳಾಗಿರುವುದರಿಂದ ಅಭಿವೃದ್ಧಿ ವಿಚಾರದಲ್ಲಿ ಪರಸ್ಪರ ಸೌಹಾರ್ದಯುತವಾಗಿ ಸದಾ ಸಂಪೂರ್ಣ ಸಹಕಾರ ಇರುವುದೆಂದು ಉಭಯ ಶಾಸಕರು ತಿಳಿಸಿದರು.
ಈ ವೇಳೆ ಮಲ್ಲಿಕಾರ್ಜುನ ಅರುಣಿ. ಶ್ರೀನಿವಾಸ ರೆಡ್ಡಿ ಅಮ್ಮ ಕೋಲ. ಸುದರ್ಶನ ರೆಡ್ಡಿ. ಕೆ ಶ್ರೀ ನಿವಾಸ ರೆಡ್ಡಿ. ಚೆನ್ನರೆಡ್ಡಿ. ಚಂದ್ರಕಾಂತ ಗಂಧ. ರಾಮಣ್ಣ ಬಳಿಚಕ್ರ. ರಾಘವೇಂದ್ರ ರೆಡ್ಡಿ. ಪುರುಷೋತ್ತಮ ಗೌಡ ಹಾಗೂ ಹಿರಿಯ ಮುಖಂಡರು ಇತರರು ಇದ್ದರು