ಎಸ್ ಆರ್ ಎಸ್ ಶಾಲೆಯಲ್ಲಿ ಅಂತರ್ರಾಷ್ಟ್ರಿಯ ಯೋಗ ದಿನಾಚರಣೆ

ಸಂಜೆವಾಣಿ ವಾರ್ತೆ
ಸಂಡೂರು :ಜೂ: 22: ಶಿವಪುರ ಶಿಕ್ಷಣ ಸಮಿತಿಯು,  ಶಿವಪುರ ಶಿಕ್ಷಣ ಸಮಿತಿಯ ಮತ್ತು ಸೊಂಡೂರು ಎಜ್ಯುಕೇಷನ್ ಸೊಸೈಟಿಯ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸೊಂಡೂರು ವಸತಿ ಶಾಲೆಯ ಆಟದ ಮೈದನದಲ್ಲಿ 9 ನೆಯ ಅಂತರ್ರಾಷ್ಟ್ರೀಯ ಯೋಗ ದಿನವನ್ನು ಏರ್ಪಡಿಸಿತ್ತು.  ಈ ಅಂತರ್ರಾಷ್ಟ್ರೀಯ ಯೋಗದ ಸಮಾರಂಭದ ಉದ್ಘಾಟನೆಯನ್ನು ಶಿವಪುರ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಶ್ರೀಮತಿ ಆಶಿಯಾಬಾನು ಅವರು ಉದ್ಘಾಟಿಸಿದರು.  ಈ ಸಮಾರಂಭದಲ್ಲಿ ಶಿವಪುರ ಶಿಕ್ಷಣ ಸಮಿತಿ ಮತ್ತು ಸೊಂಡೂರು ಎಜ್ಯುಕೇಷನ್ ಸೊಸೈಟಿಯ ಆಡಳತಾಧಿಕಾರಿಗಳಾದ ಕರ್ನಲ್ ರವೀಂದ್ರ ರೆಡ್ಡಿಯವರು ಯೋಗ ಕಾರ್ಯಕ್ರಮವನ್ನು ಉದ್ದೇಶಿಸಿ,  “ಪ್ರತಿ ದಿನವೂ ಯೋಗ ಮಾಡುವದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ; ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ.  ಯೋಗವು ಆರೋಗ್ಯಕರ ಜೀವನ ಶೈಲಿಯನ್ನು ಮತ್ತು ಉತ್ತಮ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ.  ನಾವು ಪ್ರತಿನಿತ್ಯ ಯೋಗ ಮಾಡುವದರಿಂದ ಅದು ಉತ್ತಮ ಅಭ್ಯಾಸವಾಗುತ್ತದೆಯಲ್ಲದೇ ಯೋಗವು ಸ್ನಾಯುವಿನ ಬಲವನ್ನೂ, ಏಕಗ್ರತೆಯನ್ನೂ ಸುಧಾರಿಸುತ್ತದೆ, ಶಕ್ತಿ ಮತ್ತು ತ್ರಾಣವನ್ನು ಉತ್ತೇಜಿಸುತ್ತದೆ, ಆತಂಕ, ಒತ್ತಡ ಮತ್ತು ಖಿನ್ನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ವೃದ್ಧಿಪಡಿಸುತ್ತದೆ” ಎಂದು ತಿಳಿಸಿದರು. ಯೋಗವು – “ನಾವು ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಎದುರಿಸುತ್ತಿರುವ ಮಾನಸಿಕ ಒತ್ತಡ, ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ನಿರೂಪಣೆ ಮಾಡಿದ ಎಸ್ ಆರ್ ಎಸ್ ಶಾಲೆಯ ಶಿಕ್ಷಕಿಯಾದ ಪ್ರತಿಭಾ ಜೀರಗಿಯವರು ಈ ಅಂತರಾಷ್ಟ್ರೀಯ ಯೋಗ ದಿನವನ್ನು ಎಸ್ ಆರ್ ಎಸ್ ಶಾಲೆಯ ಮೈದಾನದಲ್ಲಿ ಏರ್ಪಡಿಸಲು ಅನುಮತಿ ನೀಡಿದ, ಅಲ್ಲದೇ ಶಾಲೆಯ ಯಾವುದೇ ಕಾರ್ಯಕ್ರಮಗಳಿಗೂ ನಮ್ಮ ಬೆನ್ನೆಲುಬಾಗಿ ನಿಂತ ಸ್ಮಯೋರ್ ಸಂಸ್ಥೆಯ ವ್ಯವಸ್ಥಪಕ ನಿರ್ದೇಶಕರಾದ ಬಹಿರ್ಜಿ ಘೋರ್ಪಡೆಯವರಿಗೆ ಶಿವಪುರ ಶಿಕ್ಷಣ ಸಮಿತಿಯ ಪರವಾಗಿ ವಂದನೆಗಳನ್ನು ತಿಳಿಸಿದರು.
ವೇದಿಕೆಯಲ್ಲಿ ಶಿವಪುರ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಆಶಿಯಾಬಾನು, ಸೊಂಡೂರು ಎಜ್ಯುಕೇಷನ್ ಸೊಸೈಟಿಯ ಕಾರ್ಯದರ್ಶಿಗಳಾದ ಜಗದೀಶ ಬಸಾಪುರ, ಯೋಗ ಗುರುಗಳಾದ ಸಂಜೀವ ಸ್ವಾಮಿ, ಅವರು ಉಪಸ್ಥಿತರಿದ್ದರು.  ಕಾರ್ಯಕ್ರಮದ ನಿರೂಪಣೆಯನ್ನು ಪ್ರತಿಭಾ ಜೀರಗಿ, ವಂದನಾರ್ಪಣೆಯನ್ನು ಎಸ್ ಆರ್ ಎಸ್ ಶಾಲೆಯ ಪ್ರಚಾರ್ಯರಾದ ಮುತ್ತುಪ್ರಕಾಶ್ ಅವರು ಮಾಡಿದರು. ವಿದ್ಯಾಮಂದಿರ, ಎಸ್ ಜಿ ಆರ್ ಎಸ್ (ಹೋಸಪೇಟೆ), ಎಸ್ ಆರ್ ಎಸ್, ಎಸ್ ಇ ಎಸ್ ಛತ್ರಪತಿ ಪ್ರೌಡ ಬಾಲಕರ, ಎಸ್ ಇ ಎಸ್ ಹಿರಿಯ ಪ್ರಾಥಮಿಕ ಮತ್ತು ಎಸ್ ಇ ಎಸ್ ಬಾಲಕಿಯರ ಶಾಲೆಯ ಶಾಲೆಯ ಒಟ್ಟು 1750 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೂ ಅಲ್ಲದೇ ಈ ಎಲ್ಲ ಶಾಲೆಗಳ ಪ್ರಾಂಶುಪಾಲರು, ಮುಖ್ಯ ಗುರುಗಳು,  ಶಿಕ್ಷಕರು ಮತ್ತು ಶಿಕ್ಷಕಿಯರು ಈ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಎಸ್ ಆರ್ ಎಸ್ ಶಾಲೆಯ ಮೈದನದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಉದ್ಘಾಟಿಸಿದ ಶಿವಪುರ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಆಶಿಯಾಬಾನು ಅವರೊಡನೆ ಎಸ್ ಇ ಎಸ್ ಎಜ್ಯೂಕೇಷನ್ ಸೊಸೈಟಿಯ ಕಾರ್ಯದರ್ಶಿಗಳಾದ ಜಗದೀಶ ಬಸಾಪುರ, ಕರ್ನಲ್ ರವೀಂದ್ರ ರೆಡ್ಡಿ, ಯೋಗ ಶಿಕ್ಷಕ ಸಂಜೀವ್ ಸ್ವಾಮಿ, ಶಿಕ್ಷಕರಾದ ತೋಟಪ್ಪಯ್ಯ ಮತ್ತಿತರರು ಉಪಸ್ಥಿತರಿದ್ದರು.