ಎಸ್‌ ಆರ್‌ ಎಸ್‌ ಪಿಯು ಕಾಲೇಜಿನಲ್ಲಿ ನಾಟಕ ಪ್ರದರ್ಶನ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಆ.೧೮; ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ರಂಗ ಮಂಟಪದಲ್ಲಿ ನಾಟಕ ಪ್ರದರ್ಶನ  ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.  ಧೀಮಂತ್‌ ಅವರ ನಿರ್ದೇಶನದಲ್ಲಿ “ಥಿಯೇಟರ್‌ ಪೋರ್ಟ್‌”, ಚಿತ್ರದುರ್ಗ, “ರಂಗಲೋಕ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಹಾಗೂ “ಅಕ್ಷರ ಜ್ಞಾನ ಕಲಾಸಂಘ(ರಿ)” ಇವರ ಸಹಯೋಗದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯಾಧಾರಿತ “ಬೋಳೇಶಂಕರ” ನಾಟಕ ಹಾಗೂ “ಕೃಷ್ಣೇಗೌಡನ ಆನೆ “ ದಿರ್ಘಗದ್ಯವನ್ನು ನಾಟಕ ಅಭಿನಯದ ಮೂಲಕ ಯಶಸ್ವಿ ಪ್ರದರ್ಶನ ನೀಡಲಾಯಿತು.  ವಿದ್ಯಾರ್ಥಿಗಳು ನಾಟಕವನ್ನು ನೋಡಿ ಸಂಭ್ರಮಿಸುವುದರೊಂದಿಗೆ ಪರೀಕ್ಷಾ ದೃಷ್ಠಿಯಿಂದಲೂ ಹೆಚ್ಚು ಅನುಕೂಲವಾಯಿತು ಎಂದು ಸಂತಸ ಹಂಚಿಕೊಂಡರು.  ಈ ಪ್ರದರ್ಶನವನ್ನು ಕಾಲೇಜಿನ ಪ್ರಾಂಶುಪಾಲರಾದ  ಗಂಗಾಧರ್‌ ಈ. ಇವರು ತಬಲ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಇವರು, ಈ ನಾಟಕಗಳು ಪರೀಕ್ಷಾ ದೃಷ್ಠಿಯಿಂದ ಮಹತ್ವವುಳ್ಳವುಗಳಾಗಿವೆ ಎಂದು ಹೇಳಿದರು.  ಈ ನಾಟಕದ ನೇತೃತ್ವವನ್ನು ಕನ್ನಡ ಮತ್ತು ಇಂಗ್ಲೀಷ್‌ ವಿಭಾಗದ ಉಪನ್ಯಾಸಕರು ವಹಿಸಕೊಂಡಿದ್ದರು.