ಎಸ್ ಆರ್ ಎಚ್ ವಿರುದ್ಧ ‌ಆರ್ ಸಿಬಿಗೆ 6 ರನ್ ಗಳ ರೋಚಕ ಗೆಲುವು

ಚೆನೈ, ಏ.14- ಇಲ್ಲಿನ‌ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ದ ಆರ್ ಸಿಬಿ ಆರು ರನ್ ಗಳಿಂದ ಮತ್ತೊಂದು ರೋಚಕ ಜಯ ದಾಖಲಿಸಿತು. ‌
ಅಲ್ಪಮೊತ್ತದ ಹೊರತಾಗಿಯೂ ಕೊಹ್ಲಿ ಪಡೆ ಟೂರ್ನಿಯಲ್ಲಿ ಎರಡನೆ ಗೆಲುವು ಸಾಧಿಸಿತು.


ಗೆಲುವಿಗೆ ಅಗತ್ಯವಿದ್ದ 150 ರನ್ ಗಳ ಬೆನ್ನ ಹತ್ತಿದ ಎಸ್ ಆರ್ ಎಚ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ವಾರ್ನರ್ ಮತ್ತು ಮನಿಷ್ ಪಾಂಡೆ ಉತ್ತಮ ಜತೆಯಾಟವಾಡಿ ರನ್ ಕಲೆಹಾಕಿದರು. ಆರ್ಧಶತಕ ಬಾರಿಸಿ‌ ಆಡುತ್ರಿದ್ದ ವಾರ್ನರ್ 37 ಎಸೆತಗಳಲ್ಲಿ 54 ರನ್ ಗಳಿಸಿ ಜಾಮಿಸನ್ ಗೆ ವಿಕೆಟ್ ಒಪ್ಪಿಸಿದರು. ನಂತರ ಮನಿಷ್ ಪಾಂಡೆ 38 ರನ್ ಗಳಿಸಿ ಔಟಾದರು.‌
ನಂತರ ಬಂದ ಆಟಗಾರರು ಬೇಗನೆ ವಿಕೆಟ್ ಒಪ್ಪಿಸಿ‌ ಪೆವಿಲಿಯನ್ ಗೆ ಮರಳಿದರು. ಅಂತಿಮ‌ ಹಂತದಲ್ಲಿ ರಶೀದ್ ಖಾನ್ ನಡೆಸಿದ ಹೋರಾಟ ಫಲ ನೀಡಲಿಲ್ಲ. 17 ರನ್ ಗಳಿಸಿ ರನೌಟಾದರು.‌ ಅಂತಿಮವಾಗಿ ಆರ್ ಸಿ ಎಚ್ 143 ರನ್ ಗಳಿಸಿ‌ ಆರು ರನ್ ಗಳಿಂದ ಸೋಲು ಅನುಭವಿಸಿತು.
ನಿರಾಯಾಸವಾಗಿ ‌ಗೆಲ್ಲಬಹುದಾಗಿದ್ದ ಈ ಪಂದ್ಯವನ್ನು ವಾರ್ನರ್ ಪಡೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಪ್ರದರ್ಶಿಸಲು ವಿಫಲವಾಗಿದ್ದಕ್ಕೆ ಭಾರೀ ಬೆಲೆ ತೆರಬೇಕಾಯಿತು.
ಆರ್ ಸಿಬಿ ಪರ ಶಹಬಾದ್ ಅಹ್ಮದ್ ಮೂರು, ಹರ್ಷಲ್ ಪಟೇಲ್ ಹಾಗೂ ಸಿರಾಜ್ ತಲಾ ಎರಡು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು‌.
ಗ್ಲೆನ್ ಮ್ಯಾಕ್ಸ್ ವೆಲ್ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ 33ರನ್ ಗಳಿಸಿದರು.
ದೇವದತ್ತ ಪಡಿಕ್ಕಲ್, ಎಬಿ‌‌‌ ಡಿವಿಲಿಯರ್ಸ್, ವಾಷಿಂಗ್ಟನ್ ಸುಂದರ್ ಸೇರಿದಂತೆ ಇತರ ಆಟಗಾರರು ಉತ್ತಮ ಆಟ‌ ಪ್ರದರ್ಶಿಸಲು ಆರಂಭದಲ್ಲೇ ವಿಫಲರಾದರು.
ಹೋಲ್ಡರ್ 3 ಹಾಗೂ ರಶೀದ್ ಖಾನ್ ಎರಡು ವಿಕೆಟ್ ಪಡೆದರು.

ಸ್ಕೋರ್ ವಿವರ
ಆರ್ ಸಿಬಿ 8 ವಿಕೆಟ್ ಗೆ 149
ಎಸ್ ಆರ್ ಎಚ್ 9 ವಿಕೆಟ್ ಗೆ 143